ಡಿ.5 ಮತ್ತು 9ರಂದು ಸಾಂಸ್ಕೃತಿಕ ರಂಗ ಚಿತ್ತಾರ

Update: 2021-11-30 15:53 GMT

ಮಂಗಳೂರು, ನ.30: ರಂಗಸ್ಪಂದನ ಮಂಗಳೂರು ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಭಾಗಿತ್ವದಲ್ಲಿ ಸಾಂಸ್ಕೃತಿಕ ರಂಗಚಿತ್ತಾರ ಎಂಬ 2 ಸರಣಿ ಕಾರ್ಯಕ್ರಮ ಡಿ.5 ಹಾಗೂ 9ರಂದು ನಗರದಲ್ಲಿ ಆಯೋಜಿಸಲಾಗಿದೆ ಎಂದು ರಂಗಸ್ಪಂದನ ಸಂಚಾಲಕ ವಿ.ಜಿ.ಪಾಲ್ ತಿಳಿಸಿದ್ದಾರೆ.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನ ಸಭಾಂಗಣದಲ್ಲಿ ಡಿ.5ರಂದು ಸಂಜೆ 5.30ಕ್ಕೆ ಬೈಕಾಡಿ ಪ್ರತಿಷ್ಠಾಣದ ಸಹಯೋಗದೊಂದಿಗೆ ಚಿತ್ತಾರ-1ನೇ ಕಾರ್ಯಕ್ರಮ ಆಯೋಜಿಸಲಾಗಿದೆ. ಉದ್ಘಾಟನೆಯ ಬಳಿಕ ಮಹಿಳಾ ಕುಣಿತ ಭಜನೆ, ಶೋಭಾನೆ ಹಾಡು, ಭಾವಗೀತೆ, ರಂಗಸುದರ್ಶನ ಸಸಿಹಿತ್ಲು ವತಿಯಿಂದ ‘ಅಮರ್ ಸಿರಿಕುಲು’ ತುಳು ನೃತ್ಯರೂಪಕ ಪ್ರದರ್ಶನವಿರಲಿದೆ ಎಂದರು.

ಡಿ.9ರಂದು ಸಂಜೆ 6 ಗಂಟೆಗೆ ಯುವಜನ ಸಂಘ ಹಾಗೂ ಶ್ರೀ ವೀರವಿನಾಯಕ ಜನಸೇವಾ ಟ್ರಸ್ಟ್ ಸಹಯೋಗದೊಂದಿಗೆ ಬೊಕ್ಕಪಟ್ಣ ಅಕ್ಷಯ ಸಭಾಂಗಣದಲ್ಲಿ ಚಿತ್ತಾರ 2 ಕಾರ್ಯಕ್ರಮ ನಡೆಯಲಿದೆ. ಉದ್ಘಾಟನಾ ಕಾರ್ಯಕ್ರಮದ ಬಳಿಕ ಕುದ್ರೋಳಿ ಗಣೇಶ್ ಅವರಿಂದ ಜಾದೂ ಪ್ರದರ್ಶನ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಂಗಸ್ಪಂದನದ ಕಾರ್ಯದರ್ಶಿ ಸಚಿನ್ ಪಾಲ್, ಬೈಕಾಡಿ ಪ್ರತಿಷ್ಠಾನದ ಅಧ್ಯಕ್ಷರಾದ ರತ್ನಾವತಿ ಜೆ.ಬೈಕಾಡಿ, ಶ್ರೀ ವೀರ ವಿನಾಯಕ ಜನಸೇವಾ ಟ್ರಸ್ಟ್ ಅಧ್ಯಕ್ಷ ಕಿಶೋರ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News