×
Ad

ಮಂಗಳೂರು; ಆನ್‌ಲೈನ್ ವಂಚನೆ: ದೂರು ದಾಖಲು

Update: 2021-11-30 21:40 IST

ಮಂಗಳೂರು : ‘ಎನಿ ಡೆಸ್ಕ್’ ಆ್ಯಪ್ ಡೌನ್‌ ಲೋಡ್ ಮಾಡುವ ಮೂಲಕ 99,900 ರೂ. ಕಳೆದುಕೊಂಡಿರುವ ಬಗ್ಗೆ ನಗರದ ಸೈಬರ್ ಪೊಲೀಸ್ ಠಾಣೆಗೆ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ.

ಜೂ.1ರಂದು ಬೆಳಗ್ಗೆ 10 ಗಂಟೆಗೆ 7908256272 ಸಂಖ್ಯೆಯಿಂದ ದೂರುದಾರರಿಗೆ ಕರೆ ಮಾಡಿದ ಅಪರಿಚಿತನೊಬ್ಬ ಹಿಂದಿ ಭಾಷೆಯಲ್ಲಿ ಬಿಎಸ್‌ಎನ್‌ಎಲ್ ಕಚೇರಿಯಿಂದ ಮಾತನಾಡುತ್ತಿರುವುದಾಗಿ ಹೇಳಿ ಮೊಬೈಲ್ ರೀಚಾರ್ಜ್ ಅಪ್‌ಡೇಟ್ ಮಾಡಲು ‘ಎನಿ ಡೆಸ್ಕ್’ ಆ್ಯಪ್ ಡೌನ್‌ಲೋಡ್ ಮಾಡುವಂತೆ ತಿಳಿಸಿದ. ಅದರಂತೆ ದೂರುದಾರರು ಆ್ಯಪ್ ಡೌನ್‌ಲೋಡ್ ಮಾಡಿದಾಗ ವೆಬ್‌ಪೇಜ್ ತೆರೆದುಕೊಂಡಿತು. ಕರೆ ಮಾಡಿದ ವ್ಯಕ್ತಿಯು ಸಿವಿವಿ ನಂಬರ್ ಹಾಕಲು ತಿಳಿಸಿದ್ದು, ಹಾಗೇ ದೂರುದಾರರು ಸಿವಿವಿ ನಂಬರ್ ಹಾಕಿದ ಕೂಡಲೇ ಅವರ ಬ್ಯಾಂಕ್ ಖಾತೆಯಿಂದ 99,900 ರೂ. ವರ್ಗಾವಣೆಯಾಗಿದೆ ಎಂದು ದೂರಲಾಗಿದೆ.

ಈ ಬಗ್ಗೆ ಸೈಬರ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News