ಸಿಂಗಾಪುರ: ಮಹಿಳೆಯರಿಗೆ ಲೈಂಗಿಕ ಕಿರುಕುಳ; ಭಾರತೀಯ ಮೂಲದ ಶಿಕ್ಷಕನ ವಿರುದ್ಧ ಪ್ರಕರಣ

Update: 2021-11-30 17:46 GMT
ಸಾಂದರ್ಭಿಕ ಚಿತ್ರ

ಸಿಂಗಾಪುರ: ಯೋಗ ತರಬೇತಿ ಸಂದರ್ಭ 5 ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಭಾರತೀಯ ಮೂಲದ ಯೋಗಶಿಕ್ಷಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಿಂಗಾಪುರದ ಪೊಲೀಸರು ಹೇಳಿದ್ದಾರೆ.

ಸಿಂಗಾಪುರದಲ್ಲಿ ಯೋಗ ತರಬೇತಿ ಶಿಬಿರ ನಡೆಸುತ್ತಿದ್ದ 32 ವರ್ಷದ ಭಾರತೀಯ ಯೋಗ ಶಿಕ್ಷಕ (ಹೆಸರು ಬಹಿರಂಗಪಡಿಸಿಲ್ಲ) 2019ರ ಜೂನ್‌ನಿಂದ 2020ರ ಜುಲೈ ಅವಧಿಯಲ್ಲಿ 24ರಿಂದ 29 ವರ್ಷದವರೆಗಿನ 5 ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಅವರ ಮೈಸ್ಪರ್ಶಿಸಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂಬ ದೂರಿನ ಹಿನ್ನೆಲೆಯಲ್ಲಿ ಶಿಕ್ಷಕನ ವಿರುದ್ಧ ಲೈಂಗಿಕ ಕಿರುಕುಳದ 10 ಕೌಂಟ್ಸ್ ಆರೋಪ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆರೋಪಿ ಶಿಕ್ಷಕನನ್ನು ಜಾಮೀನಿನಡಿ ಬಿಡುಗಡೆಗೊಳಿಸಲಾಗಿದ್ದು ವಿಚಾರಣೆಯನ್ನು ಡಿಸೆಂಬರ್ 14ಕ್ಕೆ ಮುಂದೂಡಲಾಗಿದೆ. ಸಿಂಗಾಪುರದಲ್ಲಿ ಲೈಂಗಿಕ ಕಿರುಕುಳ ಪ್ರಕರಣದ ದೋಷಿಗಳಿಗೆ 2 ವರ್ಷದವರೆಗಿನ ಜೈಲುಶಿಕ್ಷೆ, ದಂಡ, ಛಡಿ ಏಟು ಅಥವಾ ಮೂರನ್ನೂ ವಿಧಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News