ಬೆಳ್ತಂಗಡಿ: ಪಿಎಫ್ಐ ವತಿಯಿಂದ ಮ್ಯಾರಥಾನ್, ದೈಹಿಕ ಕಸರತ್ತು ಪ್ರದರ್ಶನ

Update: 2021-11-30 17:52 GMT

ಬೆಳ್ತಂಗಡಿ; "ಜನಾರೋಗ್ಯವೇ ರಾಷ್ಟ್ರಶಕ್ತಿ" ರಾಷ್ಟ್ರೀಯ ಆರೋಗ್ಯ ಜಾಗೃತಿ ಅಭಿಯಾನದ ಅಂಗವಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬೆಳ್ತಂಗಡಿ ಜಿಲ್ಲಾ ವತಿಯಿಂದ ಮ್ಯಾರಥಾನ್ ಓಟ ಮತ್ತು ದೈಹಿಕ ಕಸರತ್ತು ಪ್ರದರ್ಶನ ಕಾರ್ಯಕ್ರಮ ನಡೆಯಿತು.

ಕರ್ನಾಟಕ ಮುಸ್ಲಿಂ ಜಮಾಅತ್ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಎಸ್ ಎಂ ಕೋಯಾ ಮತ್ತು ಪತ್ರಕರ್ತ ಅಶ್ರಫ್ ಅಲಿಕುಂಞಿಯವರೊಂದಿಗೆ ಜತೆಗೂಡಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಉಜಿರೆ ಡಿವಿಷನ್ ಅದ್ಯಕ್ಷರಾದ ಮಹಮ್ಮದ್ ಅಲಿಯವರು ಕರೀಂ ಜಿ.ಕೆ.ಯವರಿಗೆ  ಧ್ವಜ ಹಸ್ತಾಂತರಿಸುವ ಮೂಲಕ ಮ್ಯಾರಥಾನ್ ಗೆ  ಅಧಿಕೃತ ಚಾಲನೆ ನೀಡಿದರು

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಸ್ತಫಾ ಜಿ.ಕೆ. ವಹಿಸಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಎಸ್ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ ಮಾತನಾಡಿ ಜನರ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಿದರು. ನವಾಝ್ ಶರೀಫ್ ಕಟ್ಟೆ ಪ್ರಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಪಾಪ್ಯುಲರ್ ಫ್ರಂಟ್ ಬೆಳ್ತಂಗಡಿ ಜಿಲ್ಲಾ ಕಾರ್ಯದರ್ಶಿ ತ್ವಾಹೀರ್ ಇಂಜಿನಿಯರ್,  ಹೈದರ್ ನೀರ್ಸಾಲ್,  ಉಜಿರೆ ಡಿವಿಷನ್ ಕಾರ್ಯದರ್ಶಿ ಸಫ್ವಾನ್ ಹಾಗೂ ಮತ್ತಿತರ ನಾಯಕರು ಉಪಸ್ಥಿತರಿದ್ದರು.

ಶಾಹುಲ್ ಉಜಿರೆ ಕಾರ್ಯಕ್ರಮ ನಿರ್ವಹಿಸಿದರು.ಕಾರ್ಯಕ್ರಮದಲ್ಲಿ ಪಿಎಫ್ಐ ಕಾರ್ಯಕರ್ತರಿಂದ ದೈಹಿಕ ಕಸರತ್ತು ಪ್ರದರ್ಶನ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News