ಆತೂರು: ಆಯಿಶಾ ಶಿಕ್ಷಣ ಸಂಸ್ಥೆಯಲ್ಲಿ 'ಮಹಿಳೆ ಸುರಕ್ಷತೆ, ಸೈಬರ್ ಅಪರಾಧ-ಮಾದಕ ವ್ಯಸನದಿಂದ ಮುಕ್ತಿ' ಸಂವಾದ ಕಾರ್ಯಕ್ರಮ
Update: 2021-12-01 15:01 IST
ಆತೂರು: ಇಲ್ಲಿನ ಆಯಿಶಾ ಶಿಕ್ಷಣ ಸಂಸ್ಥೆಯಲ್ಲಿ "ಮಹಿಳೆ ಸುರಕ್ಷತೆ, ಸೈಬರ್ ಅಪರಾಧ ಮತ್ತು ಮಾದಕ ವ್ಯಸನದಿಂದ ಮುಕ್ತಿ" ವಿಷಯದ ಕುರಿತು ಪ್ರೌಢಶಾಲೆ ಮತ್ತು ಪಿಯು ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಮಂಗಳವಾರ ನಡೆಯಿತು.
ಕಡಬ ಪೊಲೀಸ್ ಠಾಣಾಧಿಕಾರಿ ರುಕ್ಮ ನಾಯ್ಕ ಅವರು ಸೈಬರ್ ಅಪರಾಧ, ಸಾಮಾಜಿಕ ಜಾಲತಾಣಗಳ ಹಾಗೂ ಮೊಬೈಲ್ ಬಳಕೆ, ಲೈಂಗಿಕ ದೌರ್ಜನ್ಯ, ಮಾದಕ ವ್ಯಸನಗಳ ದುಷ್ಪರಿಣಾಮ ಇತ್ಯಾದಿ ವಿಚಾರಗಳ ಕುರಿತು ಮಾಹಿತಿ ನೀಡಿದರು.
ಪ್ರಾಂಶುಪಾಲೆ ಆಯಿಶಾ ಫರ್ಝಾನ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಲಾ ಸಂಚಾಲಕರಾದ ಅಬ್ದುಲ್ ಹಸೀಬ್ ವಂದಿಸಿದರು. ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ರವೂಫ್ ಬಿ.ಕೆ. ಹಾಗು ಬೋಧಕ ವೃಂದದವರು ಉಪಸ್ಥಿತರಿದ್ದರು.