ವಿಧಾನ ಪರಿಷತ್ ಚುನಾವಣೆ; ಮತ ಚಲಾಯಿಸಲು ಜೊತೆಗಾರರ ನೇಮಕಕ್ಕೆ ಮನವಿ ಸಲ್ಲಿಸಲು ಸೂಚನೆ

Update: 2021-12-01 16:48 GMT

ಮಂಗಳೂರು, ಡಿ.1: ದ.ಕ. ಮತ್ತು ಉಡುಪಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾವಣಾ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಡಿ.10ರಂದು ನಡೆಯುವ ಚುನಾವಣೆಯಲ್ಲಿ ಮತ ಚಲಾಯಿಸಲು ಜೊತೆಗಾರರ ನೇಮಕಕ್ಕೆ ಅವಕಾಶ ಕಲ್ಪಿಸಲಾಗಿದೆ.

ಮತದಾರರ ಪೈಕಿ ಯಾರಾದರೂ ಮತದಾರರು ಅನಕ್ಷರಸ್ಥಾರಾಗಿದ್ದಲ್ಲಿ ಅಥವಾ ಮತಪತ್ರದಲ್ಲಿ ಅಂಕೆಗಳ ಮೂಲಕ ಪ್ರಾಶಸ್ತ್ರದ ಮತವನ್ನು ನಮೂದಿಸಲು ಅಸಹಾಯಕರಾಗಿದ್ದಲ್ಲಿ 18 ವರ್ಷ ಪ್ರಾಯದ ತುಂಬಿದ ಒಬ್ಬ ಜೊತೆಗಾರರನ್ನು ನೇಮಿಸಿ ಡಿ.7ರೊಳಗೆ ಕೋರಿಕೆ ಪತ್ರವನ್ನು ಸಲ್ಲಿಸಲು ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News