ಅಂಜು ಬಾಬಿ ಜಾರ್ಜ್ ಗೆ ವಿಶ್ವ ಅಥ್ಲೆಟಿಕ್ಸ್ 'ವರ್ಷದ ಮಹಿಳೆ' ಪ್ರಶಸ್ತಿ

Update: 2021-12-02 07:18 GMT

ಹೊಸದಿಲ್ಲಿ: ಭಾರತದ ಮಾಜಿ ಕ್ರೀಡಾಪಟು ಅಂಜು ಬಾಬಿ ಜಾರ್ಜ್ ಅವರಿಗೆ ವಿಶ್ವ ಅಥ್ಲೆಟಿಕ್ಸ್  'ವರ್ಷದ ಮಹಿಳೆ'  ಪ್ರಶಸ್ತಿ ನೀಡಿ ಗೌರವಿಸಿದೆ.

ಭಾರತದಲ್ಲಿ ಕ್ರೀಡೆಯನ್ನು ಮುನ್ನಡೆಸಲು ಅವರ ಪ್ರಯತ್ನಗಳು ಹಾಗೂ  ಅವರ ಹೆಜ್ಜೆಗಳನ್ನು ಅನುಸರಿಸಲು ಹೆಚ್ಚಿನ ಮಹಿಳೆಯರನ್ನು ಪ್ರೇರೇಪಿಸುವ ಮೂಲಕ ಈ ವರ್ಷದ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಜಾರ್ಜ್ ಭಾರತದ ಮಾಜಿ ಅಂತರ್ ರಾಷ್ಟ್ರೀಯ ಲಾಂಗ್ ಜಂಪ್ ತಾರೆಯಾಗಿದ್ದು, ಈಗಲೂ ಕ್ರೀಡೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

 2016 ರಲ್ಲಿ ಅವರು ಯುವತಿಯರಿಗೆ ತರಬೇತಿ ಅಕಾಡೆಮಿಯನ್ನು ತೆರೆದರು. ಇದು ಈಗಾಗಲೇ ವಿಶ್ವ ಅಂಡರ್-20 ಪದಕ ವಿಜೇತರನ್ನು ತಯಾರಿಸಲು ಸಹಾಯ ಮಾಡಿದೆ.

ಭಾರತೀಯ ಅಥ್ಲೆಟಿಕ್ಸ್ ಫೆಡರೇಶನ್‌ನ ಹಿರಿಯ ಉಪಾಧ್ಯಕ್ಷರಾಗಿರುವ ಬಾಬಿ ಜಾರ್ಜ್ ಅವರು ಕ್ರೀಡೆಯಲ್ಲಿ ಭವಿಷ್ಯದ ನಾಯಕತ್ವ ಸ್ಥಾನಗಳಿಗಾಗಿ ಶಾಲಾಮಕ್ಕಳಿಗೆ ಮಾರ್ಗದರ್ಶನ ನೀಡುತ್ತಾರೆ. ಈ ಎಲ್ಲ ಸಾಧನೆಗೆ  ಅವರಿಗೆ ವರ್ಷದ ಮಹಿಳೆ ಪ್ರಶಸ್ತಿಯನ್ನು ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News