ಕಾಪು ಅಲ್ ರಿಹಾ ವಿವಿದ್ದೋದ್ದೇಶ ಸಹಕಾರಿ ಸಂಘದ ಮಹಾಸಭೆ

Update: 2021-12-02 13:43 GMT

ಕಾಪು: ಕಾಪು ಅಲ್ ರಿಹಾ ವಿವಿದ್ದೋದ್ದೇಶ ಸಹಕಾರಿ ಸಂಘವು 2020-21 ನೇ ಸಾಲಿನಲ್ಲಿ ರೂ 27.5 ಲಕ್ಷ ಪಾಲು ಬಂಡವಾಳವನ್ನು  ಹೊಂದಿದ್ದು, ಪ್ರಸ್ತುತ ಸಾಲಿನಲ್ಲಿ 219.29 ಕೋಟಿ ರೂ. ವ್ಯವಹಾರವನ್ನು ಮಾಡಿ ಸುಮಾರು 15 ಕೋಟಿ ದುಡಿಯುವ ಬಂಡವಾಳವನ್ನು ಹೊಂದಿದೆ ಎಂದು ಸಂಘದ ಅಧ್ಯಕ್ಷ ಎಚ್ ಅಬ್ದುಲ್ಲಾ ಹೇಳಿದರು.

ಅವರು ಮಂಗಳವಾರ ಕಾಪುವಿನ ಜೆಸಿ ಭವನದಲ್ಲಿ 2020-21ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಸ್ಥೆಯು ಠೇವಣೆ ಸಂಗ್ರಹಣೆಯಲ್ಲಿಯೂ ಗಣನೀಯ  ಪ್ರಗತೀಯನ್ನು ಹೊಂದಿದೆ. ಕಳೆದ 4-5 ವರ್ಷಗಳಿಂದಲೂ ಲೆಕ್ಕ ಪರಿಶೋಧನೆಯಲ್ಲಿ ಸಂಘ “ಎ” ಶ್ರೇಣಿಯ ಸಹಕಾರ ಸಂಘವಾಗಿರುತ್ತದೆ. ಕಾಪು ಪ್ರಧಾನ ಕಚೇರಿ ಹಾಗು ಪಡುಬಿದ್ರಿ ಶಾಖೆಯ  ಕಚೇರಿಯು ಸ್ವಂತ ಕಟ್ಟಡವಾಗಿದ್ದು, ಕಾಪು , ಪಡುಬಿದ್ರಿ ಮತ್ತು ಶಿರ್ವ ಶಾಖೆಗಳು ಉತ್ತಮ ರೀತಿಯಿಂದ ಪ್ರಗತಿ ಹೂಂದುತ್ತಿದೆ ಎಂದರು.

2021ನೆ ಸಾಲಿನ ಲಾಭಾಂಷದಿಂದ ಶೇ. 10 ಡಿವಿಡೆಂಡ್ ಘೋಷಿಸಿದರು.

ಸಂಘದ ನಿರ್ದೆಶಕರಾದ ಎಂ ಪಿ ಮೊಹಿದಿನಬ್ಬ ಇವರು ಮಾತನಾಡಿ ಎಲ್ಲಾ ಸದಸ್ಯರು ಸಂಘದಲ್ಲಿ ಕನಿಷ್ಠ ವ್ಯವಹಾರವನ್ನಾದರು ಮಾಡಿ  ಸಂಘವನ್ನು ಬಲಪಡಿಸಬೇಕು ಎಂದು ವಿನಂತಿಸಿದರು.

ಸಂಘದ  ನಿರ್ದೆಶಕರುಗಳಾದ ಮಹ್ಮದ್ ಪಕೀರ್, ನವೀದ್ ನಾಝಿರ್ ಶೇಖ್, ಹಸನಬ ಶೇಖ್, ಅಬ್ದುಲ್ ಹಮೀದ್, ಮಹ್ಮದ್ ಸಾದಿಕ್, ಝೀನತ್ ಬಾನು, ಶಫಿ ಅಹ್ಮದ್ ,ಯು ಸಿ ಶೇಖಬ್ಬ, ಸಬಿಯ ಖಾತೂನ್, ಫರಿದ ಬಾನು ಇವರುಗಳು ಉಪಸ್ಥಿತರಿದ್ದರು.

ಕಾರ್ಯದರ್ಶಿ ಗೀತಾ ಎ ಪಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಂಘದ ನಿರ್ದೆಶಕರಾದ ಹಸನಬ್ಬ ಶೇಖ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News