×
Ad

ವಿಷಸೇವಿಸಿ ಆತ್ಮಹತ್ಯೆ

Update: 2021-12-03 22:01 IST

ಶಂಕರನಾರಾಯಣ, ಡಿ.3: ಕೆಲಸವಿಲ್ಲದೇ ಮನೆಯಲ್ಲೆ ಇದ್ದು, ವಿಪರೀತ ಮದ್ಯ ಸೇವಿಸುವ ಚಟ ಹೊಂದಿದ್ದ ಅಂಪಾರಿನ ಕೇಶವ ಆಚಾರ್ಯ (59) ಎಂಬವರು ನ.24ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಬೆಳಗಿನ ಜಾವ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಉಬ್ಬಸ ಕಾಯಿಲೆಯಿಂದಲೂ ಬಳಲುತಿದ್ದ ಅವರು ಕಳೆದ ನ.24ರಂದು ಅಂಪಾರು ಗ್ರಾಮದ ಬಲಾಡಿಯ ತಮ್ಮ ಮನೆಯಲ್ಲಿ ಶರಾಬಿಗೆ ಯಾವುದೋ ವಿಷ ಸೇರಿಸಿ ಕುಡಿದು ಅಸ್ವಸ್ಥಗೊಂಡಿದ್ದು, ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ನಿನ್ನೆ ಮುಂಜಾನೆ ಮೃತಪಟ್ಟಿದ್ದು, ಈ ಬಗ್ಗೆ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News