ತ್ವರಿತವಾಗಿ ಸೋಂಕಿನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಏಶ್ಯ-ಪೆಸಿಫಿಕ್ ರಾಷ್ಟ್ರಗಳಿಗೆ ಡಬ್ಲ್ಯೂಎಚ್‌ಓ ಎಚ್ಚರಿಕೆ

Update: 2021-12-03 17:36 GMT

ಮನಿಲಾ,ಡಿ.3: ಅಂತಾರಾಷ್ಟ್ರೀಯ ಪ್ರಯಾಣ ನಿರ್ಬಂಧಗಳ ಹೊರತಾಗಿಯೂ ಒಮಿಕ್ರಾನ್ ವೈರಸ್ ಸೋಂಕು ಜಾಗತಿಕ ವಾಗಿ ಹರಡುತ್ತಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಏಶ್ಯ-ಪೆಸಿಫಿಕ್ ರಾಷ್ಟ್ರಗಳಿಗೆ ಎಚ್ಚರಿಕೆಯನ್ನು ನೀಡಿದೆ.

ಏಶ್ಯದಲ್ಲಿ ಈ ವಾರ ಒಮಿಕ್ರಾನ್ ವೈರಸ್‌ನ ಪ್ರಕರಣಗಳು ಭಾರತ, ಜಪಾನ್, ಮಲೇಶ್ಯ, ಸಿಂಗಾಪುರ ಹಾಗೂ ದಕ್ಷಿಣ ಕೊರಿಯಗಳಲ್ಲಿ ವರದಿಯಾಗಿವೆ. ಒಮಿಕ್ರಾನ್ ರೂಪಾಂತರಿ ಹರಡದಂತೆ ತಡೆಯಲು ಹಲವಾರು ಸರಕಾರವು ಪ್ರಯಾಣ ನಿರ್ಬಂಧಗಳನ್ನು ಘೋಷಿಸಿದ್ದವು. ಆದರೆ 65 ಕೋಟಿಗೂ ಅಧಿಕ ಜನರು ವಾಸಿಸುತ್ತಿರುವ ಏಶ್ಯ-ಪೆಸಿಫಿಕ್ ಭೂಪ್ರದೇಶದಲ್ಲಿ ಗಡಿನಿರ್ಬಂಧಗಳನ್ನು ವಿಧಿಸುವುದಕ್ಕೆ ಭಾರೀ ಸಮಯ ಬೇಕಾಗುತ್ತದೆ. ಹೀಗಾಗಿ ಆ ಸೋಂಕನ್ನು ಎದುರಿಸಲು ಸೂಕ್ತ ಕ್ರಮಗಳನ್ನು ರೂಪಿಸಬೇಕೆಂದು ಡಬ್ಲುಎಚ್‌ಓ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News