ಹಂಸಲೇಖರಿಗೆ ಚಿತ್ರರಂಗ ಸಂಪೂರ್ಣ ಬೆಂಬಲ : ನಟ ಧನಂಜಯ್

Update: 2021-12-04 06:48 GMT

ಕುಂದಾಪುರ : ಹಂಸಲೇಖ ಅವರು ಡಾ. ರಾಜ್ ಕುಮಾರ್ ನಂತರದಲ್ಲಿ ಅತಿ ದೊಡ್ಡ ಸ್ಥಾನದಲ್ಲಿರುವವರು. ಚಿತ್ರರಂಗಕ್ಕೆ, ಬರವಣಿಗೆಗೆ ಅವರು ನೀಡಿರುವ ಕೊಡುಗೆ ದೊಡ್ಡದು. ಅವರ ವಿಚಾರದಲ್ಲಿ ಉಂಟಾಗಿರುವ ವಿವಾದದ ಕುರಿತಂತೆ ಚಿತ್ರರಂಗ ಕಮೆಂಟ್ಸ್ ಮಾಡದೇ ಇರಬಹುದು. ಆದರೆ ಇಡೀ ಚಿತ್ರರಂಗ ಅವರ ಬೆನ್ನಹಿಂದೆ ಇದೆ ಎಂದು ನಟ ಧನಂಜಯ್ ಅವರು ಹೇಳಿದ್ದಾರೆ.

ಕಾರ್ಟೂನ್ ಹಬ್ಬದ ನಿಮಿತ್ತ ಕುಂದಾಪುರಕ್ಕೆ ಶುಕ್ರವಾರ ಆಗಮಿಸಿದ್ದ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.

ಖ್ಯಾತ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಕಾರ್ಟೂನ್ ಬಳಗದಿಂದ ಕುಂದಾಪುರ ಪಾರಿಜಾತ ಸಮೀಪದ ಅಥರ್ವ ಕಾಂಪ್ಲೆಕ್ಸ್ ನಲ್ಲಿ 3 ದಿನಗಳ ಕಾಲ ಹಮ್ಮಿಕೊಳ್ಳಲಾಗದ ಕಾರ್ಟೂನು ಹಬ್ಬಕ್ಕೆ  ಶುಕ್ರವಾರ ಚಾಲನೆ ನೀಡಲಾಯಿತು.

ಕಾರ್ಟೂನ್ ಹಬ್ಬದ 8ನೇ ಆವೃತ್ತಿಯನ್ನು ಖ್ಯಾತ ಕಲಾವಿದ ಬಾದಲ್ ನಂಜುಂಡಸ್ವಾಮಿ ಇವರು ಪುನೀತ್ ಅವರ ಕಾರ್ಟೂನ್ ಭಾವಚಿತ್ರವನ್ನು  ಬಿಡಿಸುವ ಮೂಲಕ ಉದ್ಘಾಟಿಸಿದರು. ಅದನ್ನು ಚಿತ್ರ ನಟ ಪ್ರಶಸ್ತಿ ವಿಜೇತ ನಿರ್ಮಾಪಕ ಧನಂಜಯ್ ಕೆ.  ಅನಾವರಣ ಗೊಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಧನಂಜಯ ಅವರು ನಮಗೆ ಬದುಕನ್ನು ಕಲಿಸಿಕೊಟ್ಟ ಅಪ್ಪು ಅವರನ್ನು ನೆನಪಿಕೊಂಡು, ಅಪ್ಪು ಅವರ ನೆನಪಲ್ಲಿ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು ನಮಗೆ ಖುಷಿ ತಂದಿದೆ. ಬದುಕಿದರೆ ಹೀಗೆ ಬದುಕಬೇಕು, ಎಷ್ಟು ಅದ್ಭುತವಾಗಿ ಬದುಕನ್ನು ರೂಪಿಸಬಹುದು, ಎಷ್ಟು ಅದ್ಭುತವಾಗಿ  ಬದುಕನ್ನು ಕೊಡಬಹುದು, ಎಷ್ಟು ಚೆನ್ನಾಗಿ ಬದುಕನ್ನು ಎಂಜಾಯಿ ಮಾಡಬಹುದು ಎಂಬುದನ್ನು ಕಲಿಸಿ ಕೊಟ್ಟು ಹೋದವರು ನಮ್ಮ ಅಪ್ಪು ಎಂದು ಅವರನ್ನು ಸ್ಮರಿಸಿದರು.

ಮತ್ತೆ ಮಕ್ಕಳ ಬಾಲ್ಯ ಕಾರ್ಟೂನ್ ನಿಂದ ಪ್ರಾರಂಭವಾಗುತ್ತೆ. ಮಕ್ಕಳು ಬಣ್ಣಗಳನ್ನು ಅಥವ ಕಾರ್ಟೂನುಗಳನ್ನು ನೋಡಿ ಆಕರ್ಷಿತರಾಗುತ್ತಾರೆ. ಮಕ್ಕಳು ಕಾರ್ಟೂನು ಚಿತ್ರಗಳನ್ನು ನೋಡಿ ಓದುವನ್ನು ಸುರುಮಾಡುತ್ತಾರೆ. ಈ ಕಾರ್ಟೂನು ನಲ್ಲಿ ಒಂದು ದೊಡ್ಡ ಶಕ್ತಿ ಇದೆ ಎಷ್ಟೋ ಜನರ ವ್ಯಕ್ತಿತ್ವವನ್ನು ಕಟ್ಟುತ್ತದೆ, ಎಷ್ಟೋ ಜನರ ಬದುಕನ್ನು ಕಟ್ಟುತ್ತದೆ, ಅಲ್ಲದೆ ಜನರನ್ನು ಒಗ್ಗೂಡಿಸುವಂತಹ ಶಕ್ತಿ ಈ ಕಾರ್ಟೂನು ನಲ್ಲಿ ಇದೆ ಎಂದು ಹೇಳಿದರು.

ಜಗತ್ತು ಒಂದು ಹಳ್ಳಿ ತರ ಇದ್ದರೆ ಚೆನ್ನಾಗಿರುತ್ತೆ. ಜಗತ್ತಿನಲ್ಲಿ ಎಲ್ಲಾ ಕಡೆ ಬೇರೆ ಬೇರೆ ಭಾಷೆಯವರು ಇದ್ದಾರೆ, ಬೇರೆ ಬೇರೆ ಜಾತಿಯವರಿದ್ದಾರೆ, ಎಲ್ಲಾ ಧರ್ಮದವರು ಇದ್ದಾರೆ ಎಲ್ಲಾರು ಒಬ್ಬರೋನೊಬ್ಬರು ಗೌರವಿಸಿಕೊಂಡು, ಪ್ರೀತಿಸಿಕೊಂಡು ಜೊತೆಗೆ ಬೆರೆತುಕೊಂಡು ಹೋದರೆ ಜಗತ್ತು ಚೆನ್ನಾಗಿರುತ್ತೆ ಮುಂದಿನ ಪೀಳಿಗೆಗೆ ಮಾದರಿ ಆಗುತ್ತೆ ಎಂದು ಹೇಳಿದರು.

ವೃತ್ತಿಪರ ಕಾರ್ಟೂನ್ ಬಳಗದ ಸತೀಶ್ ಆಚಾರ್ಯ ಮಾತನಾಡಿ ಕಳೆದ 7 ವರ್ಷಗಳಿಂದ ಕಾರ್ಟೂನ್ ಹಬ್ಬ ನಡೆಸುತ್ತಿದ್ದೇವೆ  ಇಂದು 8ನೇ ವರ್ಷಕ್ಕೆ ಕಾಲಿಟ್ಟಿದ್ದೇವೆ. ಅಮೃತೋತ್ಸವದ 75ನೇ ಸ್ವಾತಂತ್ರ್ಯೋತ್ಸವ ಆ ಕಾರಣ ಮುಂದಿನ ಭವಿಷ್ಯ ಏನು,  ಸವಾಲುಗಳೇನು, ಮುಂದಿನ ಸವಲತ್ತುಗಳೇನು ಇವುಗಳ ಬಗ್ಗೆ ಹಲವಾರು ಗಣ್ಯರು ತಮ್ಮ ತಮ್ಮ  ಸಂದೇಶವನ್ನು ಕಳಿಸಿದ್ದಾರೆ. ಆ ನಿಟ್ಟಿನಲ್ಲಿ ಈ ಬಾರಿ ನಾವು ಪೇರೆಂಟ್ಸ್ ಮತ್ತು ಸ್ಟೂಡೆಂಟ್  ಕಂಪೇಟಿಟ್ ಮಾಡಿದ್ದೇವೆ. ಈ ಕಾರ್ಟೂನ್ ಹಬ್ಬದಿಂದ  ಎಲ್ಲರಿಗೂ ಒಂದು ಪ್ರೇರಣೆ ಆಗಲಿ ಮತ್ತು ಸ್ಫೂರ್ತಿ ಸಿಗಲಿ ಎನ್ನುವುದು ನಮ್ಮ ಬಯಕೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹೊಂಬಾಳೆ ಫಿಲಂ ನಿರ್ಮಾಪಕ ಕಾರ್ತಿಕ್ ಗೌಡ, ಕಾಂಗ್ರೆಸ್ ನಾಯಕ ಖ್ಯಾತ ವಕೀಲರದ ಸುಧೀರ್ ಕುಮಾರ್ ಮಾರೋಳಿ, ಕಲಾಕ್ಷೇತ್ರ ಕುಂದಾಪುರ ಹಾಗೂ ಬಿಜೆಪಿ ನಾಯಕ ಕಿಶೋರ್ ಕುಮಾರ್, ಹಿರಿಯ ವಕೀಲರಾದ ಎಎಸ್ಎನ್ ಹೆಬ್ಬಾರ್ ಇವರು ಉಪಸ್ಥಿತರಿದ್ದರು.

ಸತೀಶ್ ಆಚಾರ್ಯ  ಸ್ವಾಗತಿಸಿದರು, ಪ್ರದೀಪ್ ಶೆಟ್ಟಿ ಕೆಂಚಿನೂರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News