ಸರಕಾರಿ ಉದ್ಯೋಗಗಳಿಗೆ ತಮಿಳು ಪರೀಕ್ಷೆಯನ್ನು ಕಡ್ಡಾಯಗೊಳಿಸುವ ಆದೇಶ ಹೊರಡಿಸಿದ ತಮಿಳುನಾಡು

Update: 2021-12-04 08:23 GMT
ಸಾಂದರ್ಭಿಕ ಚಿತ್ರ 

ಚೆನ್ನೈ: ತಮಿಳುನಾಡಿನ ಎಲ್ಲಾ ಸರಕಾರಿ ಉದ್ಯೋಗಗಳಿಗೆ ತಮಿಳು ಅರ್ಹತಾ ಪರೀಕ್ಷೆಯನ್ನು ಕಡ್ಡಾಯಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.

ಇಲ್ಲಿಯವರೆಗೆ, ಭಾಷೆ ಗೊತ್ತಿಲ್ಲದ ಅಭ್ಯರ್ಥಿಗಳು ಸಹ ಸರಕಾರಿ ಉದ್ಯೋಗಗಳಲ್ಲಿ ಸ್ಥಾನ ಪಡೆದಿದ್ದರೆ  ಸೇವೆಗೆ ಪ್ರವೇಶಿಸಿದ ಎರಡು ವರ್ಷಗಳೊಳಗೆ ಅವರು 10ನೇ ತರಗತಿ ಹಂತದ  ತಮಿಳು ಪರೀಕ್ಷೆಯನ್ನು ತೇರ್ಗಡೆಗೊಳಿಸಬೇಕು.

"ತಮಿಳುನಾಡು ಪಬ್ಲಿಕ್ ಸರ್ವಿಸ್ ಕಮಿಷನ್ ನಡೆಸುವ ಎಲ್ಲಾ ನೇಮಕಾತಿ ಪರೀಕ್ಷೆಗಳಿಗೆ ತಮಿಳು ಅರ್ಹತಾ ಪರೀಕ್ಷೆಯು ಕಡ್ಡಾಯವಾಗಿದೆ. ಅಭ್ಯರ್ಥಿಗಳು 10ನೇ ತರಗತಿ ಹಂತದ  ಪರೀಕ್ಷೆಯಲ್ಲಿ ಅರ್ಹತೆ ಪಡೆಯಲು ಕನಿಷ್ಠ 40 ಶೇ. ಅಂಕಗಳನ್ನು ಪಡೆಯಬೇಕು.

“ಅಭ್ಯರ್ಥಿಗಳು ತಮಿಳು ಪರೀಕ್ಷೆಯಲ್ಲಿ ಅರ್ಹತೆ ಪಡೆಯದಿದ್ದರೆ ಇತರ ವಿಷಯಗಳ ಉತ್ತರ ಪತ್ರಿಕೆಗಳನ್ನು ಟಿಎನ್ ಪಿಎಸ್ ಸಿ ಮೌಲ್ಯಮಾಪನ ಮಾಡುವುದಿಲ್ಲ ”ಎಂದು ಮಾನವ ಸಂಪನ್ಮೂಲ ನಿರ್ವಹಣಾ ಕಾರ್ಯದರ್ಶಿ ಮೈಥಿಲಿ ಕೆ. ರಾಜೇಂದ್ರನ್ ಆದೇಶದಲ್ಲಿ ತಿಳಿಸಿದ್ದಾರೆ.  ಇದು ಬುಧವಾರದಿಂದ ಜಾರಿಗೆ ಬರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News