ಮೋದಿ, ಬಿಜೆಪಿ ವಿರುದ್ಧ ಹೋರಾಡುವವರು ಕಾಂಗ್ರೆಸ್ ಮುಗಿಯಬೇಕೆಂದು ಬಯಸುವುದು ದೊಡ್ಡ ಅಪಾಯ: ಶಿವಸೇನೆ

Update: 2021-12-04 12:41 GMT
Photo credit: ANI

ಮುಂಬೈ: ಕಾಂಗ್ರೆಸ್ ಪಕ್ಷವನ್ನು ಟೀಕಿಸಿರುವ ಹಾಗೂ ಕಾಂಗ್ರೆಸ್ ನೇತೃತ್ವದ ಯುಪಿಎ ಅಂತ್ಯಗೊಂಡಿದೆ ಎಂದು ಹೇಳಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ನಡೆಗೆ ಶಿವಸೇನೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆಯಲ್ಲದೆ ಇದು ಈಗ ದೇಶದಲ್ಲಿರುವ ಫ್ಯಾಸಿಸ್ಟ್ ಸರಕಾರವನ್ನು ಇನ್ನಷ್ಟು ಸಶಕ್ತಗೊಳಿಸಿದಂತಾಗಿದೆ ಎಂದು ಹೇಳಿದೆ ಎಂದು theprint.in ವರದಿ ಮಾಡಿದೆ.

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮಿತ್ರಪಕ್ಷವಾಗಿರುವ ಶಿವಸೇನೆ ಈ ಕುರಿತು ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಬರೆದುಕೊಂಡಿದೆ ಹಾಗೂ ವಿಪಕ್ಷಗಳ ಮುಂದಿರುವ ನಿಜವಾದ ಆಯ್ಕೆಯೆಂದರೆ ಯುಪಿಎ ಅನ್ನು ಇನ್ನಷ್ಟು ಸಶಕ್ತಗೊಳಿಸುವುದಾಗಿದೆ ಎಂದು ಹೇಳಿದೆ.

ಕಾಂಗ್ರೆಸ್ ಪಕ್ಷವು ಯುಪಿಎ ನಾಯಕತ್ವ ಹೊಂದಿರುವುದನ್ನು ಒಪ್ಪದ ಮಂದಿ ಹಾಗೆ ಬಹಿರಂಗವಾಗಿ ಹೇಳಬೇಕು, ಬದಲು ಪರದೆಯ ಹಿಂದಿನ ಇಂತಹ ಹೇಳಿಕೆಗಳು ಶಂಕೆಗಳಿಗೆ ಕಾರಣವಾಗುತ್ತವೆ ಎಂದು ಶಿವಸೇನೆ ಹೇಳಿದೆ.

"ಕಾಂಗ್ರೆಸ್ ಪಕ್ಷದ ಕಥೆ ಮುಗಿಯಬೇಕೆಂದು ಪ್ರಧಾನಿ ಮೋದಿ ಮತ್ತು ಬಿಜೆಪಿ ಬಯಸಿರಬಹುದು. ಅದು ಅವರ ಯೋಜನೆಯ ಉದ್ದೇಶ, ಆದರೆ  ಮೋದಿ ಮತ್ತು ಬಿಜೆಪಿಯ ವಿರುದ್ಧ ಹೋರಾಡುವವರು ಕೂಡ ಕಾಂಗ್ರೆಸ್ ಕಥೆ ಮುಗಿಯಬೇಕೆಂದು ಬಯಸಿದರೆ ಅದು ದೊಡ್ಡ ಅಪಾಯ,'' ಎಂದು ಶಿವಸೇನೆ ಹೇಳಿದೆ.

"ಯುಪಿಎ ಗೆ ಪರ್ಯಾಯಗಳ ಕುರಿತು ಚರ್ಚಿಸಿ ವಿಪಕ್ಷಗಳು ಸಮಯ ನಷ್ಟಗೊಳಿಸುತ್ತಿವೆ. ಬಲಿಷ್ಠ ವಿಪಕ್ಷ ಬೇಕಿದ್ದವರು ತಾವಾಗಿಯೇ ಯುಪಿಎ ಬಲವರ್ಧನೆಗೆ ಮುಂದೆ ಬರಬೇಕು,'' ಎಂದು ಶಿವಸೇನೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News