ಮುಂಬೈಯಲ್ಲಿ ದೇಶದ ನಾಲ್ಕನೇ ಒಮೈಕ್ರಾನ್ ಪ್ರಕರಣ ದೃಢ
Update: 2021-12-04 19:44 IST
ಮುಂಬೈ: ದಕ್ಷಿಣ ಆಫ್ರಿಕಾದಿಂದ ದುಬೈ ಮೂಲಕ ಮುಂಬೈಗೆ ಆಗಮಿಸಿದ್ದ ವ್ಯಕ್ತಿಗೆ ಒಮೈಕ್ರಾನ್ ಪ್ರಕರಣ ದೃಢಪಟ್ಟಿದೆ ಎಂದು ವರದಿಯಾಗಿದೆ.
ಮಹಾರಾಷ್ಟ್ರದ 33 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಇದು ದೇಶದಲ್ಲಿ ಪತ್ತೆಯಾದ ನಾಲ್ಕನೇ ಪ್ರಕರಣ. ಈ ಮೊದಲು ಕರ್ನಾಟಕದಲ್ಲಿ ಎರಡು, ಗುಜರಾತ್ ನಲ್ಲಿ ಒಂದು ಪ್ರಕರಣ ಪತ್ತೆಯಾಗಿತ್ತು.