ಹೊಸ ಪಕ್ಷ ರಚಿಸುವ ಉದ್ದೇಶವಿಲ್ಲ, ರಾಜಕೀಯದಲ್ಲಿ ಏನಾಗುತ್ತದೋ ಗೊತ್ತಿಲ್ಲ: ಗುಲಾಂ ನಬಿ ಆಝಾದ್

Update: 2021-12-05 07:53 GMT

ಶ್ರೀನಗರ: ಜಮ್ಮು ಹಾಗೂ  ಕಾಶ್ಮೀರದಲ್ಲಿ ಹೊಸ ಪಕ್ಷವನ್ನು ರಚಿಸುವ ಉದ್ದೇಶ ನನಗಿಲ್ಲ. ರಾಜಕೀಯದಲ್ಲಿ ಮುಂದೆ ಏನಾಗುತ್ತದೆ ಎಂದು ಯಾರಿಗೂ ತಿಳಿದಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಗುಲಾಂ ನಬಿ ಆಝಾದ್ ಹೇಳಿದ್ದಾರೆ.

ಆಝಾದ್ ಅವರು ಜಮ್ಮು-ಕಾಶ್ಮೀರದಾದ್ಯಂತ ನಡೆಸಿದ ಸರಣಿ ಸಭೆಗಳು ಅವರು ಹೊಸ ಪಕ್ಷವನ್ನು ರಚಿಸುತ್ತಿದ್ದಾರೆ ಎಂಬ ಊಹಾಪೋಹವನ್ನು ಹೆಚ್ಚಿಸಿವೆ. ಅವರ 20 ಮಂದಿ ನಿಷ್ಠಾವಂತರು ಕಾಂಗ್ರೆಸ್ ಹುದ್ದೆಗಳಿಗೆ ರಾಜೀನಾಮೆ ನೀಡಿರುವುದು ಸುದ್ದಿಗೆ ಗ್ರಾಸವಾಗಿದೆ.

ಜಮ್ಮು-ಕಾಶ್ಮೀರಕ್ಕೆ ಅದರ ರಾಜ್ಯ ಸ್ಥಾನಮಾನ  ಹಾಗೂ  ವಿಶೇಷ ಸ್ಥಾನಮಾನವನ್ನು ತೆಗೆದುಹಾಕಿದ ನಂತರ ನಿಂತು ಹೋದ ರಾಜಕೀಯ ಚಟುವಟಿಕೆಗಳನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಈ ರ್ಯಾಲಿಗಳು ಎಂದು ಆಝಾದ್ ಹೇಳಿದರು.

"ಯಾರೂ ನಾಯಕತ್ವಕ್ಕೆ ಸವಾಲು ಹಾಕುತ್ತಿಲ್ಲ. ಬಹುಶಃ ಇಂದಿರಾಗಾಂಧಿ ಹಾಗೂ ರಾಜೀವ್ ಜೀ ಅವರು ವಿಷಯಗಳು ತಪ್ಪಾದಾಗ ಪ್ರಶ್ನಿಸಲು ನನಗೆ ಹೆಚ್ಚಿನ ಸ್ವಾತಂತ್ರ್ಯವನ್ನು ನೀಡಿದ್ದರು. ಅವರು ಎಂದಿಗೂ ಟೀಕೆಗಳನ್ನು ಲೆಕ್ಕಿಸುತ್ತಿರಲಿಲ್ಲ. ಅವರು ಅದನ್ನು ಆಕ್ರಮಣಕಾರಿಯಾಗಿ ನೋಡುವುದಿಲ್ಲ. ಇಂದು ನಾಯಕತ್ವವು ಅದನ್ನು ಆಕ್ರಮಣಕಾರಿಯಾಗಿ ನೋಡುತ್ತದೆ'' ಎಂದು ಅವರು ರಾಂಬನ್‌ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ನಂತರ NDTV ಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News