ರಾಜ್ಯಸಭೆಯಿಂದ ಅಮಾನತುಗೊಂಡ ಬಳಿಕ ಸಂಸದ್‌ ಟಿವಿ ನಿರೂಪಕಿ ಹುದ್ದೆಗೆ ರಾಜೀನಾಮೆ ನೀಡಿದ ಪ್ರಿಯಾಂಕಾ ಚತುರ್ವೇದಿ

Update: 2021-12-05 10:40 GMT

ಹೊಸದಿಲ್ಲಿ: ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ʼಅಶಿಸ್ತಿನ ವರ್ತನೆʼಗಾಗಿ ಇತರ ಹನ್ನೊಂದು ಮಂದಿಯೊಂದಿಗೆ ರಾಜ್ಯಸಭೆಯಿಂದ ಅಮಾನತುಗೊಂಡ ನಂತರ ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ಸಂಸದ್ ಟಿವಿಯಲ್ಲಿನ ಕಾರ್ಯಕ್ರಮದ ನಿರೂಪಕಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದಿರುವ ಅವರು, "ಸಂಸದ್ ಟಿವಿಯ ಮೇರಿ ಕಹಾನಿ ಕಾರ್ಯಕ್ರಮದ ನಿರೂಪಕಿ ಸ್ಥಾನದಿಂದ ನಾನು ಕೆಳಗಿಳಿಯುತ್ತಿರುವುದು ತೀವ್ರ ದುಃಖ ತಂದಿದೆ. ಸಂಸದ್ ಟಿವಿಯಲ್ಲಿ ಕಾರ್ಯಕ್ರಮವೊಂದಕ್ಕೆ ಸ್ಥಳವನ್ನು ಆಕ್ರಮಿಸಿಕೊಳ್ಳಲು ನನಗೆ ಇಷ್ಟವಿಲ್ಲ ಆದರೆ 12 ಸಂಸದರನ್ನು ಅನಿಯಂತ್ರಿತವಾಗಿ ಅಮಾನತುಗೊಳಿಸಿರುವ ಕಾರಣ ಸಂಸದೀಯ ಕರ್ತವ್ಯಗಳನ್ನು ನಿರ್ವಹಿಸಲು ನನಗೆ ಅವಕಾಶ ನಿರಾಕರಿಸಲಾಗಿದೆ. ಆದ್ದರಿಂದ, ನಾನು ಕಾರ್ಯಕ್ರಮಕ್ಕೆ ಎಷ್ಟು ಬದ್ಧಳಾಗಿದ್ದೇನೋ, ನಾನು ಅಷ್ಟೇ ದೂರ ಹೋಗಬೇಕಾಗಿದೆ ಎಂದು ಪತ್ರದಲ್ಲಿ ಅವರು ಉಲ್ಲೇಖಿಸಿದ್ದಾರೆ.

ಆಗಸ್ಟ್‌ನಲ್ಲಿ ನಡೆದಿದ್ದ ಹಿಂದಿನ ಅಧಿವೇಶನದಲ್ಲಿ "ಅಶಿಸ್ತಿನ" ವರ್ತನೆಗಾಗಿ 12 ವಿರೋಧ ಪಕ್ಷದ ಸಂಸದರನ್ನು ಸಂಸತ್ತಿನ ಸಂಪೂರ್ಣ ಚಳಿಗಾಲದ ಅಧಿವೇಶನಕ್ಕಾಗಿ ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿತ್ತು. ಅಮಾನತುಗೊಂಡಿದ್ದ ಸಂಸದರಲ್ಲಿ ಕಾಂಗ್ರೆಸ್‌ನ ಆರು, ತೃಣಮೂಲ ಕಾಂಗ್ರೆಸ್ ಮತ್ತು ಶಿವಸೇನೆಯ ತಲಾ ಇಬ್ಬರು ಮತ್ತು ಸಿಪಿಐ ಮತ್ತು ಸಿಪಿಐ(ಎಂ)ನ ತಲಾ ಒಬ್ಬರು ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News