ಕಬಕ : ಜಲಾಲಿಯತ್ ರಾತಿಬ್
ಕಬಕ: ಇಲ್ಲಿನ ಮುಹಿಯ್ಯುದ್ದೀನ್ ಜುಮಾ ಮಸೀದಿಯಲ್ಲಿ ವರ್ಷಂ ಪ್ರತಿ ಆಚರಿಸಿಕೊಂಡು ಬರುತ್ತಿರುವ ಜಲಾಲಿಯತ್ ರಾತಿಬ್ ಸಯ್ಯಿದ್ ಕೆ.ಎಸ್.ಜಾಫರ್ ಸ್ವಾದಿಕ್ ತಂಙಳ್ ಕುಂಬೋಳ್ ನೇತೃತ್ವದಲ್ಲಿ ಕಬಕ ಮುಹಿಯ್ಯುದ್ದೀನ್ ಜುಮಾ ಮಸೀದಿಯಲ್ಲಿ ಶನಿವಾರ ನಡೆಯಿತು.
ಮರ್ಹೂಂ ಸಯ್ಯಿದ್ ಎ.ಪಿ.ಎಸ್. ಮುಹಮ್ಮದ್ ತಂಙಳ್ ಹಾಗೂ ಜಮಾಅತ್ ಪರವಾಗಿ ಸಾಮೂಹಿಕ ಪ್ರಾರ್ಥನೆ ಬಳಿಕ ಜಲಾಲಿಯತ್ ರಾತಿಬ್ ನಡೆಯಿತು.
ಜುಮಾ ಮಸೀದಿ ಅಧ್ಯಕ್ಷ ಸಿತಾರ್ ಇಬ್ರಾಹಿಮ್ ಹಾಜಿ ಕಬಕ, ಉಪಾಧ್ಯಕ್ಷ ಕೆ.ಪಿ.ಸಲೀಮ್ ಹಾಜಿ ಪೋಳ್ಯ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇಕ್ಬಾಲ್ ಕಸ್ತೂರಿ, ಕಾರ್ಯದರ್ಶಿಗಳಾದ ಅಬ್ದುಲ್ ರಶೀದ್ ಸಖಾಫಿ, ಮುಹಮ್ಮದ್ ಅರ್ಷದ್ ಕೆ.ಎಸ್. ಕಬಕ, ಕೋಶಾಧಿಕಾರಿ ಹಂಝ ತಾಜ್ ಮಹಲ್ ಕಬಕ, ಸದಸ್ಯರಾದ ಮುಹಮ್ಮದ್ ಕಬಕ, ಝುಬೈರ್ ಬ್ರೈಟ್ ಪೋಳ್ಯ, ಮುಹಮ್ಮದ್ ಕಸ್ತೂರಿ, ಹಾರೀಸ್ ಯುನೈನ್ ಕಬಕ, ಉಮ್ಮರ್ ಫಾರೂಕ್ ತವಕಲ್ ಕಬಕ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಕಾರ್ಯಕರ್ತರು ಭಾಗವಹಿಸಿದ್ದರು.
ಜಲಾಲಿಯ್ಯ ವಾರ್ಷಿಕದ ಅಂಗವಾಗಿ ಎರಡು ದಿನ ಮತ ಪ್ರಭಾಷಣ ಕಾರ್ಯಕ್ರಮ ನಡೆಯಿತು. ಡಿ.2ರಂದು ಮಾಣಿ ಉಸ್ತಾದ್ ದುಆ ನೆರವೇರಿಸಿದರು. ಕಬಕ ಖತೀಬ್ ಅಲ್ ಹಾಜ್ ಅಬ್ದುಲ್ ಹಮೀದ್ ಬಾಖವಿ ಉಸ್ತಾದ್ ಉದ್ಘಾಟಿಸಿದರು. ಹಾಫಿಳ್ ಮಸೂದ್ ಸಖಾಫಿ ಗೂಡಲ್ಲೂರು ಮುಖ್ಯ ಪ್ರಭಾಷಣಗೈದರು.
ಡಿ.3ರಂದು ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಬಿ.ಕೆ.ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ ಉಸ್ತಾದ್ ದುಆ ನೆರವೇರಿಸಿದರು. ಮೇಲ್ಪರಂಬ್ ಕಾಸರಗೋಡು ಖತೀಬ್ ಅಶ್ರಫ್ ರಹ್ಮಾನಿ ಚೌಕಿ ಮುಖ್ಯ ಪ್ರಭಾಷಣಗೈದರು.