ಮಣಿಪಾಲ: ಕಲಾಸಕ್ತರಿಗಾಗಿ ಉಚಿತ ಚಿತ್ರಕಲಾ ಕಾರ್ಯಾಗಾರ

Update: 2021-12-05 15:05 GMT

ಮಣಿಪಾಲ, ಡಿ.5: ಪ್ರಷಾ ಸೇವಾ ಟ್ರಸ್ಟ್ ಉಡುಪಿ-ಮಣಿಪಾಲ ಹಾಗೂ ತ್ರಿವರ್ಣ ಕಲಾ ಕೇಂದ್ರದ ಸಹಯೋಗದಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಕಲಾಸಕ್ತರಿಗಾಗಿ ಟ್ರಸ್ಟ್ನ ಸ್ಥಾಪಕ ಅಧ್ಯಕ್ಷ ದಿವಂಗತ ಡಿ.ವಿ.ಶೆಟ್ಟಿಗಾರ್ ಸ್ಮರಣಾರ್ಥ ಉಚಿತ ಒಂದು ದಿನದ ಚಿತ್ರಕಲಾ ಕಾರ್ಯಾಗಾರವನ್ನು ಮಣಿಪಾಲದ ತ್ರಿವರ್ಣ ಕಲಾಕೇಂದ್ರದಲ್ಲಿ ರವಿವಾರ ಆಯೋಜಿಸಲಾಗಿತ್ತು.

ಕಾರ್ಯಾಗಾರವನ್ನು ಉದ್ಘಾಟಿಸಿದ ಉಡುಪಿ ಚಿತ್ರಕಲಾ ವಿದ್ಯಾಮಂದಿರದ ನಿರ್ದೇಶಕ ಡಾ.ಯು.ಸಿ.ನಿರಂಜನ್ ಮಾತನಾಡಿ, ಸೃಜನಶೀಲತೆ ಮತ್ತು ಏಕಾಗ್ರತೆ ಯನ್ನು ಉದ್ದೀಪನಗೊಳ್ಳಲು ಹಾಗೂ ಬದುಕನ್ನು ಅರಿತು ಜೀವನೋತ್ಸಾಹ ಬೆಳೆಸಲು ಚಿತ್ರಕಲೆ ಸಹಕಾರಿಯಾಗಿತ್ತದೆ ಎಂದು ಹೇಳಿದರು.

ಅತಿಥಿಗಳಾಗಿ ರಾಮಕೃಷ್ಣ ನಾಯಕ್ ಚಾರಿಟೇಬಲ್ ಟ್ರಸ್ಟ್ ನ  ಟ್ರಸ್ಟಿ ಸುರೇಂದ್ರ ನಾಯಕ್, ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ ಮಾತನಾಡಿದರು. ಟ್ರಸ್ಟ್ ನ ಅಧ್ಯಕ್ಷ ನಾಗರಾಜ ಕಟೀಲ್ ಉಪಸ್ಥಿತರಿದ್ದರು. ತ್ರಿವರ್ಣ ಕಲಾಕೇಂದ್ರದ ನಿರ್ದೇಶಕ ಹರೀಶ್ ಸಾಗಾ ಪ್ರಾಸ್ತಾವಿಕವಾಗಿ ಮಾತನಾಡಿದರು.

ಅನುಷಾ ಆಚಾರ್ಯ ಸ್ವಾಗತಿಸಿದರು. ಶರಣ್ಯಾ ವಂದಿಸಿದರು. ಟ್ರಸ್ಟ್ನ ಕಾರ್ಯದರ್ಶಿ ಡಾ.ವಸುಧಾ ದೇವಿ ಕಾರ್ಯಕ್ರಮ ನಿರ್ವಹಿಸಿದರು. ಚಿತ್ರಕಲೆ ಪ್ರಾಥಮಿಕ ಜ್ಞಾನ ಹಾಗೂ ರಚನೆ, ಮತ್ತು ಪೆನ್ಸಿಲ್ ಶೇಡಿಂಗ್ ಕುರಿತು ತ್ರಿವರ್ಣ ಕಲಾಕೇಂದ್ರದ ನಿರ್ದೇಶಕರಾದ ಹರೀಶ್ ಸಾಗಾ ತರಬೇತಿ ನೀಡಿದರು. ಮಣಿಪಾಲ, ಉಡುಪಿ, ಬಂಟ್ವಾಳ, ಕಾಪು ಮತ್ತು ಮಂಗಳೂರಿನಿಂದ ಒಟ್ಟು 30 ಮಂದಿ ಚಿತ್ರಕಲಾ ಶಿಬಿರದ ಪ್ರಯೋಜನ ಪಡೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News