ಮಂಗಳೂರು: ವಿವಿಧ ಕ್ಷೇತ್ರದ ಸಾಧಕರಿಗೆ 'ಮುಲ್ಕಿ ಸುಂದರರಾಮ ಶೆಟ್ಟಿ' ಪ್ರಶಸ್ತಿ ಪ್ರದಾನ

Update: 2021-12-05 15:52 GMT

ಮಂಗಳೂರು, ಡಿ. 5: ನಮ್ಮೂರ ಆಟ ಕೂಟ ಟ್ರಸ್ಟ್‌ನ ಉದ್ಘಾಟನೆ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಮುಲ್ಕಿ ಸುಂದರರಾಮ ಶೆಟ್ಟಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ರವಿವಾರ ನಗರದ ಪುರಭವನದಲ್ಲಿ ನಡೆಯಿತು.

ಶಿಕ್ಷಣ, ಕ್ರೀಡೆ, ಉದ್ಯಮ ಕ್ಷೇತ್ರದ ಸಾಧಕ ಎ. ಸದಾನಂದ ಶೆಟ್ಟಿ , ಹನುಮಂತ ಕಾಮತ್ (ಸಾಮಾಜಿಕ ಜಾಗೃತಿ), ಸರ್ವೋತ್ತಮ ಬಿ.ಶೆಟ್ಟಿ (ವಿದೇಶದಲ್ಲಿ ತುಳು, ಕನ್ನಡ ಸಂಘಟನೆ), ಕದ್ರಿ ನವನೀತ್ ಶೆಟ್ಟಿ (ಸಾಂಸ್ಕೃತಿಕ- ಧಾರ್ಮಿಕ), ಪಟ್ಲ ಸತೀಶ್ ಶೆಟ್ಟಿ (ಯಕ್ಷಗಾನ), ವಿಠಲ್ ಡಿ. ಶೆಟ್ಟಿ (ಬ್ಯಾಂಕಿಂಗ್) ಅವರಿಗೆ ಮುಲ್ಕಿ ಸಂದರರಾಮ ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಒಡಿಯೂರು ಶ್ರೀ ಗುರು ದತ್ತಾಂಜನೇಯ ಕ್ಷೇತ್ರದ ಗುರು ದೇವಾನಂದ ಸ್ವಾಮೀಜಿ ಮುಲ್ಕಿ ಸುಂದರ ರಾಮ ಶೆಟ್ಟಿಆದರ್ಶ ವ್ಯಕ್ತಿಯಾಗಿದ್ದರು. ಬ್ಯಾಂಕ್ ಸೇವೆ ಮತ್ತು ಜನಪರ ಆಡಳಿತ ನೀಡಿದ್ದ ಮೇರು ವ್ಯಕ್ತಿತ್ವದ ಅವರು ಸದಾ ಸ್ಮರಣೀಯರು ಎಂದು ಹೇಳಿದರು.

ನಿಟ್ಟೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ನಿಟ್ಟೆ ವಿಶ್ವ ವಿದ್ಯಾನಿಲಯದ ಕುಲಾಧಿಪತಿ ಡಾ.ಎನ್. ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಸಕ ಡಿ. ವೇದವ್ಯಾಸ ಕಾಮತ್ ಟ್ರಸ್ಟ್ ಉದ್ಘಾಟಿಸಿ ಮಾತನಾಡಿದರು. ಬ್ಯಾಂಕ್ ಆ್ ಬರೋಡಾದ ಜನರಲ್ ಮ್ಯಾನೇಜರ್ ಹಾಗೂ ವಲಯ ಮುಖ್ಯಸ್ಥ ಗಾಯತ್ರಿ ಆರ್. ಱನಮ್ಮೂರ ಆಟ ಕೂಟ ಟ್ರಸ್ಟ್‌ಱನ ಲಾಂಛನ ಅನಾವರಣಗೊಳಿಸಿದರು.

ಮುಖ್ಯ ಅತಿಥಿಗಳಾಗಿ ಮೇಯರ್ ಪ್ರೇಮಾನಂದ ಶೆಟ್ಟಿ, ಶಾಸಕ ಡಾ. ವೈ. ಭರತ್ ಶೆಟ್ಟಿ, ಅಲೆಮಾರಿ ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಎ.ಸಿ. ಭಂಡಾರಿ, ಸಂಗೀತ ನಿರ್ದೇಶಕ ಗುರು ಚರಣ್ ಭಾಗವಹಿಸಿದ್ದರು.

ಟ್ರಸ್ಟ್‌ನ ಗೌರವ ಅಧ್ಯಕ್ಷ ಕದ್ರಿ ನವನೀತ್ ಶೆಟ್ಟಿ ಸ್ವಾಗತಿಸಿದರು. ಸ್ಥಾಪಕ ಅಧ್ಯಕ್ಷ ಮುಲ್ಕಿ ಕರುಣಾಕರ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಟ್ರಸ್ಟ್‌ನ ಮಹಾ ಪೋಷಕರಾದ ರಾಜಗೋಪಾಲ ರೈ, ದೇವಿಚರಣ್ ಶೆಟ್ಟಿ, ತಾರನಾಥ ಶೆಟ್ಟಿ ಬೋಳಾರ್, ಇಂದ್ರಾಳಿ ಜಯಕರ ಶೆಟ್ಟಿ, ಉದಯ ಶೆಟ್ಟಿ, ಸುಂದರ ಶೆಟ್ಟಿ, ಶೋಭಾ ಶೆಟ್ಟಿ ಉಪಸ್ಥಿತರಿದ್ದರು.

ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News