ಮೂಳೂರ್ : ಸುನ್ನೀ ಸೆಂಟರ್ ಗೆ ಶಾಫಿ ಸಅದಿ ಭೇಟಿ

Update: 2021-12-05 18:33 GMT

ಕಾಪು : ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಎನ್ ಕೆ ಎಮ್ ಶಾಫಿ ಸಅದಿ ಅವರು ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಅಧೀನದಲ್ಲಿ ಮೂಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಮರ್ಕಝ್ ತಅ್ ಲೀಮಿಲ್ ಇಹ್ಸಾನ್ ವಿದ್ಯಾ ಸಮುಚ್ಚಯಕ್ಕೆ ರವಿವಾರ ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಅವರನ್ನು ಡಿಕೆಎಸ್‍ಸಿ ಸಮಿತಿ ಹಾಗೂ ಗಲ್ಫ್ ಸಮಿತಿಯ ವತಿಯಿಂದ ಶಾಫಿ ಸಅದಿ ಅವರನ್ನು ಸನ್ಮಾನಿಸಲಾ ಯಿತು. ಬಳಿಕ ಮಾತನಾಡಿದ ಅವರು, ಸುನ್ನೀ ಸೆಂಟರ್‍ನಲ್ಲಿ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣ ನೀಡುವ ಮಾದರಿ ಸಂಸ್ಥೆಯಾಗಿ ರೂಪುಗೊಂಡಿದೆ. ಈ ಸಂಸ್ಥೆ ಇನ್ನಷ್ಟು ಬೆಳೆಯಬೇಕಾಗಿದೆ ಎಂದು ಹೇಳಿದರು.

ಮರ್ಕಝ್ ಕ್ಯಾಂಪಸಿಗೆ ಶಾಫಿ ಸಅದಿ ಅವರನ್ನು ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಬಶೀರ್ ಎಂ ಅವರ ನೇತೃತ್ವದಲ್ಲಿ ವಿದ್ಯಾರ್ಥಿ ಗಳು ಪಥಸಂಚಲನದೊಂದಿಗೆ ಬರಮಾಡಿಕೊಂಡರು. ಸುನ್ನೀ ಸೆಂಟರ್‍ನ ಮ್ಯಾನೇಜರ್ ಮುಸ್ತಫಾ ಸಅದಿ ಸ್ವಾಗತಿಸಿದರು.

ಡಿಕೆಎಸ್‍ಸಿ ಸಂವಹನ ಕಾರ್ಯದರ್ಶಿ ಅಬ್ದುಲ್ ಹಮೀದ್ ಅರಮಿಕ್ಸ್ ಪ್ರಸ್ತಾವಿಕವಾಗಿ ಮಾತನಾಡಿದರು. ವಕ್ಫ್ ರಾಜ್ಯ ಸದಸ್ಯ ಯಾಕೂಬ್ ಬೆಂಗಳೂರು, ಡಿಕೆಎಸ್‍ಸಿ ದ.ಕ. ಜಿಲ್ಲಾ ಅಧ್ಯಕ್ಷ ಹುಸೈನ್ ಹಾಜಿ ಕಿನ್ಯ,, ಡಿಕೆಎಸ್‍ಸಿ ಕಾರ್ಯದರ್ಶಿ ಅಬೂಬಕ್ಕರ್ ಬರ್ವ, ನಾಯಕರಾದ ಅಬ್ದುಲ್ ಅಝೀಝ್ ಮೂಳೂರು, ಶೇಖ್ ಬಳ್ಕುಂಜೆ, ಯು.ಡಿ. ಇಬ್ರಾಹಿಂ, ಮರ್ಕಝ್ ಸಮಿತಿ ಸದಸ್ಯರದ ಹಾಜಿ ಮೊಹಿದಿನ್ ಗುಡ್‍ವಿಲ್, ಅಭಿಮಾನ್ ಹಾಜಬ್ಬ, ದಅ್ ವಾ ಪ್ರಾಂಶುಪಾಲ ಶಾಬಿರ್ ಸಅದಿ, ಅಸಿಸ್ಟೆಂಟ್ ಮ್ಯಾನೇಜರ್ ಸಿದ್ದೀಕ್ ಸಅದಿ ಮತ್ತಿತರರು ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಪ್ರವಾಸ ಕೈಗೊಂಡ ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷ ಎನ್ ಕೆ ಎಮ್ ಶಾಫಿ ಸಅದಿ ರವಿವಾರ ಕನ್ನಂಗಾರ್ ಜುಮಾ ಮಸೀದಿಗೆ ಹಾಗೂ ಪೊಲಿಪು ಜುಮಾ ಮಸೀದಿಗೆ ರವಿವಾರ ಭೇಟಿ ನೀಡಿದರು. ಕನ್ನಂಗಾರ್ ಜುಮ್ಮಾ ಮಸೀದಿಯಲ್ಲಿ  ಮಸೀದಿಯ ಆಡಳಿತಾದಿಕಾರಿ ಕೆ.ಎಂ.ಕೆ ಮಂಜನಾಡಿ, ಪೊಲಿಪು ಜುಮಾ ಮಸೀದಿಯಲ್ಲಿ ಮಸೀದಿಯ  ಸಮಿತಿ ಅಧ್ಯಕ್ಷ ಎಚ್. ಅಬ್ದುಲ್ಲಾ ಸ್ವಾಗತಿಸಿ ಸನ್ಮಾನಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News