ನಾಗಾಲ್ಯಾಂಡ್ ನ 14 ನಾಗರಿಕರ ಸಾವಿಗೆ ಕೇಂದ್ರ ಸರಕಾರ ವಿಷಾದ ವ್ಯಕ್ತಪಡಿಸುತ್ತದೆ: ಅಮಿತ್ ಶಾ

Update: 2021-12-06 10:13 GMT

ಹೊಸದಿಲ್ಲಿ: ನಾಗಾಲ್ಯಾಂಡ್ ನಲ್ಲಿ ಸೇನೆಯ ಗುಂಡಿನ ದಾಳಿಗೆ 14 ನಾಗರಿಕರ ಸಾವಿಗೆ ಕೇಂದ್ರ ಸರಕಾರ ವಿಷಾದ ವ್ಯಕ್ತಪಡಿಸುತ್ತದೆ ಎಂದು ಗೃಹ ಸಚಿವ ಅಮಿತ್ ಶಾ ಲೋಕಸಭೆಗೆ ತಿಳಿಸಿದ್ದಾರೆ.

"ಭಾರತ ಸರಕಾರವು ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸುತ್ತದೆ ಹಾಗೂ ಮೃತಪಟ್ಟವರಿಗೆ ಸಂತಾಪ ವ್ಯಕ್ತಪಡಿಸುತ್ತದೆ ... ಸಿಟ್ ರಚಿಸಲಾಗಿದೆ ಹಾಗೂ  ಒಂದು ತಿಂಗಳೊಳಗೆ ತನಿಖೆ ಪೂರ್ಣಗೊಳಿಸಲು ನಿರ್ದೇಶಿಸಲಾಗಿದೆ. ನಾಗಾಲ್ಯಾಂಡ್ ನಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ.  ಆದರೆ ನಿಯಂತ್ರಣದಲ್ಲಿದೆ. ಎಲ್ಲಾ ಸಂಸ್ಥೆಗಳು  ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯುವುದಿಲ್ಲ ಎಂದು ಅದನ್ನು ಖಚಿತಪಡಿಸಿಕೊಳ್ಳಬೇಕು''  ಎಂದು ಅಮಿತ್ ಶಾ ಹೇಳಿದ್ದಾರೆ.

 ಸಂಕ್ಷಿಪ್ತ ಹೇಳಿಕೆಯೊಂದರಲ್ಲಿ ಶಾ ಅವರು ವಾರಾಂತ್ಯದ ಘಟನೆಗಳನ್ನು ಮಾತ್ರ ವಿವರಿಸಿದರು.  ನಂತರ ವಿರೋಧ ಪಕ್ಷದ ಸಂಸದರ ಬೇಡಿಕೆಗಳನ್ನು ತಳ್ಳಿ ಹಾಕಲಾಯಿತು. ನಂತರ ವಿರೋಧ ಪಕ್ಷದ ಸಂಸದರು (ತೃಣಮೂಲ ಕಾಂಗ್ರೆಸ್ ಹೊರತುಪಡಿಸಿ) ಪ್ರತಿಭಟನೆ ನಡೆಸಿ  ಸದನದಿಂದ ಹೊರ ನಡೆದರು.

ನಾಗಾಲ್ಯಾಂಡ್‌ನಲ್ಲಿ ನಡೆದ ಹಿಂಸಾಚಾರದಲ್ಲಿ 14 ನಾಗರಿಕರು ಹಾಗೂ ಓರ್ವ ಯೋಧ ಸಾವನ್ನಪ್ಪಿದ್ದರು.  ಇಂದು ಸಂಸತ್ತಿನಲ್ಲಿ ಪ್ರತಿಪಕ್ಷಗಳು ಘಟನೆಯ ತನಿಖೆ ನಡೆಸಿ  ಹತ್ಯೆಯಾದವರ ಕುಟುಂಬಗಳಿಗೆ ಪರಿಹಾರವನ್ನು ನೀಡುವಂತೆ ಒತ್ತಾಯಿಸಿವೆ. ಈ ವಿಚಾರವಾಗಿ ಪ್ರಧಾನಿ ಮೋದಿ ಹಿರಿಯ ಸಚಿವರನ್ನು ಭೇಟಿ ಮಾಡಿದರು.

ಇಂದು ಬೆಳಗ್ಗೆ ಲೋಕಸಭೆಯಲ್ಲಿ ಕಾಂಗ್ರೆಸ್‌ ಸಂಸದ ಮನೀಶ್ ತಿವಾರಿ ಅವರು ಘಟನೆಯ ಬಗ್ಗೆ ತಮ್ಮ ವೇದನೆಯನ್ನು ವ್ಯಕ್ತಪಡಿಸಿ, ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆಗೆ ಒತ್ತಾಯಿಸಿದರು. ತಪ್ಪಿತಸ್ಥರನ್ನು ರಕ್ಷಿಸಲು ವಿವಾದಾತ್ಮಕ ಎಎಫ್‌ಎಸ್‌ಪಿಎಯನ್ನು ಅನ್ವಯಿಸಬೇಡಿ ಎಂದು ಅವರು ಸರಕಾರವನ್ನು ಒತ್ತಾಯಿಸಿದರು. ತಿವಾರಿ ಅವರ ಸಹೋದ್ಯೋಗಿ ಗೌರವ್ ಗೊಗೋಯ್ ಅವರು ನಿರಾಯುಧ ನಾಗರಿಕರನ್ನು ಸಶಸ್ತ್ರ ದಂಗೆಕೋರರು ಎಂದು ಹೇಗೆ ತಪ್ಪಾಗಿ ಗ್ರಹಿಸುತ್ತಾರೆ ಎಂಬುದನ್ನು ತಿಳಿಸಲು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News