×
Ad

ತೊಕ್ಕೊಟು: ಎಸ್ ವೈ ಎಸ್ ವತಿಯಿಂದ ಮಾಸಿಕ ವೇತನ ವಿತರಣೆ

Update: 2021-12-06 17:17 IST

ಉಳ್ಳಾಲ : ಎಸ್ ವೈ ಎಸ್ ತೊಕ್ಕೊಟು ಇದರ ಆಶ್ರಯದಲ್ಲಿ ಬಡ ಕುಟುಂಬಕ್ಕೆ ಮಾಸಿಕ ವೇತನ ವಿತರಣಾ ಕಾರ್ಯಕ್ರಮವು ಹಸನ್ ಮುಬಾರಕ್ ಸಖಾಪಿ ನೇತೃತ್ವದಲ್ಲಿ ಮುಂಡೋಳಿಯಲ್ಲಿ ನಡೆಯಿತು.

ಎಸ್ ವೈ ಎಸ್ ತೊಕ್ಕೊಟು ಬ್ರಾಂಚ್ ಅಧ್ಯಕ್ಷ ಆರಿಫ್ ಪಿಲಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್ ವೈ ಎಸ್ ಅಝಾದ್ ನಗರ ಬ್ರಾಂಚ್ ಅಧ್ಯಕ್ಷ ಬಶೀರ್ ಉಳ್ಳಾಲ ಮಾಸಿಕ ವೇತನ ವಿತರಣೆ ಮಾಡಿದರು. 

ಕಾರ್ಯಕ್ರಮದಲ್ಲಿ ದಾರಂಧಬಾಗಿಲು ಜುಮಾ ಮಸೀದಿ ಅಧ್ಯಕ್ಷ ಎಸ್ ಎಮ್ ಮುಸ್ತಪಾ, ಎಸ್ ವೈ ಎಸ್ ಸಾಂತ್ವನ ವಿಭಾಗ ಕಾರ್ಯದರ್ಶಿ ಬದುರುದ್ದೀನ್ ಶಾಂತಿಭಾಗ್, ಕೋಶಾಧಿಕಾರಿ ಸಮೀರ್ ಪಿಲಾರ್, ಎಸ್ ಎಸ್ ಎಫ್ ತೊಕ್ಕೊಟ್ಟು ಸೆಕ್ಟರ್ ಸಂಚಾಲಕ ನದೀಮ್ ದಾರಂದಬಾಗಿಲು, ಅಲ್ತಾಫ್ ಕುಂಪಲ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News