ಉಡುಪಿ: ಕೋವಿಡ್ ನಿಯಂತ್ರಣಕ್ಕೆ ವಿವಿಧ ತಂಡಗಳ ರಚನೆ

Update: 2021-12-06 16:12 GMT

ಉಡುಪಿ, ಡಿ.6: ಜಿಲ್ಲೆಯಲ್ಲಿ ಕೋವಿಡ್-19 ಹರಡುವುದನ್ನು ತಡೆಯಲು, ಜಿಲ್ಲಾಮಟ್ಟದ ಕಣ್ಗಾವಲು ಮತ್ತು ಸಾರ್ವಜನಿಕ ಆರೋಗ್ಯ ಸುರಕ್ಷಾ ಕ್ರಮಗಳ ಅನುಷ್ಠಾನಕ್ಕಾಗಿ 12 ವಿವಿಧ ತಂಡಗಳನ್ನು ರಚಿಸಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಆದೇಶಿಸಿದ್ದಾರೆ.

ಕೋವಿಡ್-19 ಸೋಂಕಿತ ವ್ಯಕ್ತಿಗಳನ್ನು ಸಿಸಿಸಿ/ಡಿಸಿಎಚ್‌ಸಿ/ಡಿಸಿಎಚ್‌ಗೆ ಸ್ಥಳಾಂತರ, ಕೋವಿಡ್ ಆರೈಕೆ ಕೇಂದ್ರಗಳ (ಸಿಸಿಸಿ) ನಿರ್ವಹಣೆ, ಸಮರ್ಪಿತ ಕೋವಿಡ್-19 ಆರೋಗ್ಯ ಕೇಂದ್ರ ಮತ್ತು ಕೋವಿಡ್-19 ಆಸ್ಪತ್ರೆಗಳು, ಸಂಪರ್ಕ ಪತ್ತೆ ಹಚ್ಚುವಿಕೆ, ಪರೀಕ್ಷೆ, ಕಂಟೈನ್ಮೆಂಟ್ ವಲಯಗಳು, ಕ್ವಾರಂಟೈನ್ ನಿಗಾವಣೆ ಮತ್ತು ಸಿಕ್ಯೂಎಎಸ್ ಹಾಗೂ ಆರೋಗ್ಯ ಸೇತು, ಸುರಕ್ಷಿತಾ ಅಂತರ, ಖಾಸಗಿ ಮತ್ತು ಸಾರ್ವಜನಿಕ ಆರೋಗ್ಯ ಸಂಸ್ಥೆಗಳು ಮತ್ತು ಜ್ವರ ಚಿಕಿತ್ಸಾಲಯ ಗಳಿಂದ ಐಎಲ್‌ಐ/ಸಾರಿ ಪ್ರಕರಣಗಳ ವರದಿ ಪಡೆಯುವಿಕೆ, ಜಿಲ್ಲಾ ನಿಯಂತ್ರಣ ಕೊಠಡಿ, ಮೃತ ದೇಹದ ನಿರ್ವಹಣೆ, ತಾಯಿ ಮತ್ತು ಮಗುವಿನ ಆರೋಗ್ಯ ಸೇವಾ ಕಾರ್ಯಕ್ರಮ ನಿರ್ವಹಣೆಗಾಗಿ ವಿವಿಧ ಅಧಿಕಾರಿಗಳ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗಿದೆ.

ಈ ಎಲ್ಲಾ ತಂಡಗಳು ಸಂಘಟಿತ ಹಾಗೂ ಸಮನ್ವಯದಿಂದ ತಮಗೆ ನಿರ್ವಹಿಸಿರುವ ಕಾರ್ಯವನ್ನು ಅನುಷ್ಠಾನಗೊಳಿಸುವಂತೆ ಹಾಗೂ ಪ್ರತಿದಿನದ ಕಾರ್ಯ ಪ್ರಗತಿ ವರದಿಯನ್ನು ನೀಡುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಆದೇಶಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News