ನಂದಿಕೂರು: ಎಕ್ಸ್ ಪ್ರೆಸ್ ಬಸ್ ನಿಲುಗಡೆಯ ಉದ್ಘಾಟನೆ

Update: 2021-12-06 17:41 GMT

ಪಡುಬಿದ್ರಿ, ಡಿ. 6: ನಂದಿಕೂರು, ಪಲಿಮಾರು, ಎಲ್ಲೂರು ಪರಿಸರದ ಜನತೆಯ ಬಹುಕಾಲದ ಬೇಡಿಕೆಯಾಗಿದ್ದ ನಂದಿಕೂರಿನಲ್ಲಿ ಮಂಗಳೂರು - ಕಾರ್ಕಳ ಮತ್ತು ಕಾರ್ಕಳ - ಮಂಗಳೂರು ಎಕ್ಸ್‍ಪ್ರೆಸ್ ಬಸ್‍ಗಳು ನಿಲುಗಡೆ ಆರಂಭಗೊಂಡಿದ್ದು, ಸೋಮವಾರದಂದು ಎಲ್ಲೂರು ಗ್ರಾ. ಪಂ. ಅಧ್ಯಕ್ಷ ಜಯಂತ್ ಕುಮಾರ್ ಬಸ್‍ಗಳ ಅಧಿಕೃತ ನಿಲುಗಡೆಯನ್ನು ಉದ್ಘಾಟಿಸಿದರು. 

ಉಡುಪಿಯ ಪ್ರಾದೇಶಿಕ ಸಾರಿಗೆ ಅ„ಕಾರಿ ಅವರು ಕರಾವಳಿ ಮತ್ತು ಕೆನರಾ ಬಸ್ ಮಾಲಕರ ಸಂಘಗಳಿಗೆ ಈ ಕುರಿತಾಗಿ ಬಂದಿದ್ದ ಮನವಿಯನ್ನು ಪುರಸ್ಕರಿಸಿದ್ದು ಮಾಲಕರ ಸಂಘವೂ ಇದನ್ನು ಸ್ವಾಗತಿಸಿದೆ. ಬಸ್‍ಗಳ ನಿಲುಗಡೆಗೆ ಈಗ ತಡೆರಹಿತ ಬಸ್‍ಗಳ ಮಾಲಕರೂ, ನಿರ್ವಾಹಕರೂ ಮುಂದಾಗಿದ್ದಾರೆ.

ನಂದಿಕೂರಿನಲ್ಲಿ ಕೈಗಾರಿಕಾ ಪ್ರದೇಶ, ಸುಜ್ಲಾನ್, ಯುಪಿಸಿಎಲ್ ಮುಂತಾದ ಬೃಹತ್ ಯೋಜನೆಗಳು ಹಾಗೂ ಐಟಿಐ ಸಂಸ್ಥೆಯೊಂದಕ್ಕೆ ರಾಜ್ಯ ಹೆದ್ದಾರಿ ಬದಿಯಲ್ಲೇ ಜಾಗವೊಂದು ಮಂಜೂರಾಗಿದ್ದು ಇಲ್ಲಿ ಸದ್ಯ ತಡೆರಹಿತ ಬಸ್ ನಿಲುಗಡೆ ಆರಂಭವಾಗಿರುವುದಿಂದ ಈ ಎಲ್ಲಾ ಯೋಜನೆಗಳ ಕಾರ್ಮಿಕರಿಗೆ, ಕೆಲಸಗಾರರಿಗೆ, ವಿದ್ಯಾರ್ಥಿಗಳಿಗೆ ಇದರಿಂದ ಉಪಯೋಗವಾಗಲಿದೆ.

ಈ ಸಂದರ್ಭದಲ್ಲಿ ನಾಗೇಶ್ ರಾವ್, ಎಲ್ಲೂರು ಗ್ರಾ. ಪಂ. ಸದಸ್ಯ ಹರೀಶ್ ಕುಲಾಲ್, ದಯಾನಂದ್ ಶೆಟ್ಟಿಗಾರ್, ಶೋಭಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News