ದ.ಕ.ಜಿಲ್ಲೆಯಲ್ಲಿ ಅರಾಜಕತೆ ಸೃಷ್ಟಿಸುವ ಶಕ್ತಿಗಳನ್ನು ಮಟ್ಟ ಹಾಕಲು ಉಲಮಾ ಒಕ್ಕೂಟ ಆಗ್ರಹ

Update: 2021-12-07 17:06 GMT

ಮಂಗಳೂರು, ಡಿ.7: ಚುನಾವಣೆ ಸಮೀಪಿಸುತ್ತಿದ್ದಂತೆಯೇ ದ.ಕ ಜಿಲ್ಲೆಯ ಅಲ್ಲಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಟ್ಟುಕೊಂಡು ಕೊಲೆಯತ್ನ, ತ್ರಿಶೂಲ ದಾಳಿ ಮರುಕಳಿಸುತ್ತಿದೆ. ಇದರಿಂದ ಅಮಾಯುಕ ಯುವಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯಲ್ಲಿ ಅರಾಜಕತೆ ಸಷ್ಟಿಸುವ ಶಕ್ತಿಗಳನ್ನು ಮಟ್ಟಹಾಕಲು ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ಉಲಮಾ ಒಕ್ಕೂಟ ಆಗ್ರಹಿಸಿದೆ.

ಮುಖ್ಯಮಂತ್ರಿಯ ಹೇಳಿಕೆಯಂತೆ ಕ್ರಿಯೆಗೆ ಪ್ರತಿಕ್ರಿಯೆ ನಡದರೆ ದ.ಕ.ಜಿಲ್ಲೆಯಲ್ಲಿ ಅರಾಜಕತೆ ಉಂಟಾಗುವುದು ಖಚಿತ. ಈಗಾಗಲೇ ಕೋಮು ಸೂಕ್ಷ್ಮ ಜಿಲ್ಲೆ ಎಂಬ ಕುಖ್ಯಾತಿಗೆ ಒಳಗಾದ ಜಿಲ್ಲೆಯ ಹೆಸರನ್ನು ಮತ್ತಷ್ಟು ಕೆಡಿಸಲು ಹೊರಟ ಕೋಮು, ಪ್ಯಾಶಸ್ಟ್ ಶಕ್ತಿಗಳನ್ನು ಮಟ್ಟಹಾಕುವುದು ಕಾನೂನು ಪಾಲಕರ ಕರ್ತವ್ಯವಾಗಿದೆ. ಸಂಘಪರಿವಾರದ ಕಿಡಿಗೇಡಿಗಳು ಮುಸ್ಲಿಮರ ಮೇಲೆ ನಿರಂತರ ದಾಳಿ ಮಾಡುವುದನ್ನು ತಡೆಗಟ್ಟದಿದ್ದರೆ ದೇಶ ಪ್ರೇಮಿ ಸಂಘ ಸಂಸ್ಥೆಗಳು ಬೀದಿಗಿಳಿದು ಹೋರಾಟ ಮಾಡು ವುದು ಅನಿವಾರ್ಯವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News