ಒಮೈಕ್ರಾನ್ ಭೀತಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಟ್ಟೆಚ್ಚರ

Update: 2021-12-08 05:45 GMT

ಮಂಗಳೂರು, ಡಿ.8: ಕೋವಿಡ್-19 ರೂಪಾಂತರಿ ಪ್ರಭೇದ ಒಮೈಕ್ರಾನ್ ಸೋಂಕಿನ ಹಿನ್ನೆಲೆಯಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ವಿದೇಶಗಳಿಂದ ಆಗಮಿಸುವ ಪ್ರಯಾಣಿಕರ ಮೇಲೆ ವಿಶೇಷ ನಿಗಾ ವಹಿಸಲಾಗುತ್ತಿದೆ.

 11 ಹೈರಿಸ್ಕ್ ದೇಶಗಳಿಂದ ಬರುವವರ ಮೇಲೆ ವಿಮಾನ ನಿಲ್ದಾಣದಲ್ಲಿ  ಎಮಿಗ್ರೇಷನ್ ವಿಭಾಗದ ಅಧಿಕಾರಿಗಳು ವಿಶೇಷ ನಿಗಾ ಇರಿಸುತ್ತಿದ್ದಾರೆ.

ಕಳೆದ 10 ದಿನಗಳಲ್ಲಿ ಹೈರಿಸ್ಕ್ ದೇಶಗಳಿಂದ ಮಂಗಳೂರಿಗೆ 48 ಮಂದಿ ಪ್ರಯಾಣಿಕರು ಆಗಮಿಸಿದ್ದಾರೆ. ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಪ್ರಯಾಣಿಕರ ಪ್ರಯಾಣ ಹಿಸ್ಟರಿ ಪಡೆಯುವ ಜಿಲ್ಲಾಡಳಿತ, ಈಗಾಗಲೇ ಆಗಮಿಸಿರುವ 48 ಮಂದಿಯ ಪೂರ್ಣ ವಿವರ ಕಲೆ ಹಾಕಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಎಲ್ಲ 48 ಮಂದಿಯ ಆರ್.ಟಿ.-ಪಿಸಿಆರ್ ಟೆಸ್ಟ್ ನಡೆಸಿದ್ದಾರೆ. ಬಳಿಕ ಅವರನ್ನು  7 ದಿನ ಕಡ್ಡಾಯ ಕ್ವಾರಂಟೈನ್ ನಲ್ಲಿ ಇರಿಸಲಾಗುತ್ತದೆ.

8ನೇ ದಿನ ಮತ್ತೇ ಹೈರಿಸ್ಕ್ ದೇಶಗಳಿಂದ ಬಂದವರ ಆರ್.ಟಿ.-ಪಿಸಿಆರ್ ಪರೀಕ್ಷೆ ಯನ್ನು  ಆರೋಗ್ಯ ಇಲಾಖೆ ಅಧಿಕಾರಿಗಳು ಮಾಡಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News