ವಿಶ್ವಕರ್ಮ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

Update: 2021-12-08 11:38 GMT

ಉಡುಪಿ, ಡಿ.8: ವೃತ್ತಿಪರ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್ ಪ್ರಥಮ ವರ್ಷಕ್ಕೆ ಸೇರ್ಪಡೆಗೊಂಡ ಜಿಲ್ಲೆಯ ವಿಶ್ವಕರ್ಮ ಸಮುದಾಯದ ವಿದ್ಯಾರ್ಥಿ ಗಳಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಲ್ಯಾಟರಲ್ ಎಂಟ್ರಿ ಮೂಲಕ ಡಿಪ್ಲೋಮಾ ಎಂ.ಸಿ.ಎ. ದ್ವಿತೀಯ ವರ್ಷದ ವಿದ್ಯಾರ್ಥಿಗಳು, ಪಾಲಿಟೆಕ್ ಡಿಪ್ಲೋಮಾ, ನರ್ಸಿಂಗ್ ಡಿಪ್ಲೋಮಾ, ಡಿ.ಎಡ್., ಲ್ಯಾಬ್ಟೆಕ್ನಾಲಜಿ ಡಿಪ್ಲೋಮಾ, ಬಿವಿಎ, ಬಿಎಸ್‌ಡಬ್ಲ್ಯೂ, ಬಿಎಸ್ಸಿ ನರ್ಸಿಂಗ್, ಕಾನೂನು ಪದವಿ, ಬಿ.ಎಡ್., ಇಂಟೀರಿಯರ್ ಡಿಸೈನ್, ಲೆಕ್ಕಪರಿಶೋಧನೆ, ಬಿ.ಎಸ್ಸಿ ಲ್ಯಾಬ್ ಟೆಕ್ನಾಲಜಿ, ಸಂಸ್ಕೃತ-ವೇದವಿದ್ವತ್, ಸ್ನಾತಕೋತ್ತರ ಪದವಿ, ಬಿ.ಇ.ಪದವಿ., ಎಂ.ಟೆಕ್., ಮೆಡಿಕಲ್ ಕೋರ್ಸ್‌ಗಳಿಗೆ ಸೇರಿರುವ ಅಭ್ಯರ್ಥಿ ಗಳು ಅರ್ಜಿ ಸಲ್ಲಿಸಬಹುದು.

ಪ್ರಸಕ್ತ ಸಾಲಿನಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿರಬೇಕು. ಆಸಕ್ತರು ಅರ್ಜಿ ಬರೆದು, ದೂರವಾಣಿ ಮೊಬೈಲ್ ಸಂಖ್ಯೆ, ಮಾರ್ಕ್ಸ್ ಕಾರ್ಡ್, ರೇಷನ್ ಕಾರ್ಡ್, ವ್ಯಾಸಂಗ ಧೃಡೀಕರಣ ಪತ್ರ ಮತ್ತು ಟ್ರಸ್ಟ್‌ನ ಪೋಷಕರ ಧೃಡೀಕರಣ ದೊಂದಿಗೆ ಡಿ.15ರೊಳಗೆ ಅಧ್ಯಕ್ಷರು ಉಡುಪಿ ಜಿಲ್ಲಾ ಶ್ರೀವಿಶ್ವಕರ್ಮ ಎಜುಕೇಷನಲ್ ಟ್ರಸ್ಟ್, ಗಾಯತ್ರಿ ಕಲ್ಯಾಣ ಮಂಟಪ, ಕುಂಜಿಬೆಟ್ಟು, ಉಡುಪಿ- 576102 ವಿಳಾಸಕ್ಕೆ ಕಳುಹಿಸಬೇಕು.

ಅರ್ಜಿ ಸಲ್ಲಿಸಿದವರು ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಡಿ.25ರಂದು ಬೆಳಿಗ್ಗೆ 9 ಗಂಟೆಗೆ ಸಂದರ್ಶನಕ್ಕೆ ಹಾಜರಾಗಿ ವಿದ್ಯಾರ್ಥಿ ವೇತನ ನೀಡಿಕೆ ಪತ್ರ ಪಡೆದು ಕೊಳ್ಳಬೇಕು. ಫೆ.13ರಂದು ವಿದ್ಯಾರ್ಥಿವೇತನ ವಿತರಿಸಲಾಗುವುದು. ಮಾಹಿತಿ ಗಾಗಿ ಮೊಬೈಲ್ ಸಂಖ್ಯೆ-9480055512, 9945542549ನ್ನು ಸಂಪರ್ಕಿಸ ಬಹುದೆಂದು ಟ್ರಸ್ಟ್ ಅಧ್ಯಕ್ಷ ಡಾ.ದಾಸಾಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News