ಡಿ.11ರಂದು ಕೈವಲ್ಯ ಮಠದ ಶಾಖಾ ಮಠ ಉದ್ಘಾಟನೆ

Update: 2021-12-08 11:40 GMT

ಉಡುಪಿ, ಡಿ.8: ಸಾರಸ್ವತ ಸಮಾಜದ ಆದ್ಯಪೀಠ ಗೋವಾದ ಕೈವಲ್ಯಪುರ ದಲ್ಲಿರುವ ಶ್ರೀಸಂಸ್ಥಾನ ಗೌಡ ಪಾದಾಚಾರ್ಯ ಕೈವಲ್ಯ ಮಠದ 17ನೆ ಹಾಗೂ ಕರ್ನಾಟಕ ರಾಜ್ಯದ ಆರನೇ ಶಾಖಾ ಮಠವನ್ನು ಉಡುಪಿ ಆತ್ರಾಡಿ ಪರಿಕ ರಸ್ತೆಯಲ್ಲಿ ನಿರ್ಮಿಸಲಾಗಿದೆ.

ಈ ನೂತನ ಶಾಖಾ ಮಠವನ್ನು ಕೈವಲ್ಯ ಮಠಾಧೀಶ ಶ್ರೀಶಿವಾನಂದ ಸರಸ್ವತಿ ಸ್ವಾಮೀ ಮಹಾರಾಜ್ ಡಿ.11ರಂದು ಅಪರಾಹ್ನ 3 ಗಂಟೆಗೆ ತಮ್ಮ ಆರಾಧ್ಯ ಮೂರ್ತಿ ಶ್ರೀಭವಾನೀ ಶಂಕರ ದೇವರಿಗೆ, ಆ ಮೂಲಕ ಸಾರಸ್ವತ ಸಮಾಜಕ್ಕೆ ಅರ್ಪಣೆ ಮಾಡಲಿದ್ದಾರೆ ಎಂದು ಮಣಿಪಾಲದ ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘದ ನಿಕಟಪೂರ್ವ ಅಧ್ಯಕ್ಷ ಶ್ರೀಶ ನಾಯಕ್ ಪೆರ್ಣಂಕಿಲ ಸುದ್ದಿಗೋಷ್ಠಿ ಯಲ್ಲಿಂದು ತಿಳಿಸಿದ್ದಾರೆ.

ಮುಖ್ಯ ಅತಿಥಿಗಳಾಗಿ ಸಚಿವ ವಿ.ಸುನಿಲ್ ಕುಮಾರ್, ಶಾಸಕರಾದ ರಘುಪತಿ ಭಟ್, ಲಾಲಾಜಿ ಮೆಂಡನ್ ಹಾಗೂ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ ಸ್ವಾಮೀಜಿ ಡಿ.10ರಂದು ಸಂಜೆ ಮಠವನ್ನು ಪ್ರವೇಶಗೈಯ್ಯಲಿದ್ದು, ಈ ಪ್ರಯುಕ್ತ ಅವರನ್ನು ಸಂಜೆ 4.30 ಗಂಟೆಗೆ ಪರ್ಕಳ ಹೈಸ್ಕೂಲು ಬಳಿಯಿಂದ ಶೋಭಾಯಾತ್ರೆಯ ಮೂಲಕ ಮಠಕ್ಕೆ ಕರೆತರಲಾಗುವುದು ಎಂದರು.

ಸ್ವಾಮೀಜಿ ಡಿ.17ರವರೆಗೆ ನೂತನ ಶಾಖಾ ಮಠದಲ್ಲಿ ಮೊಕ್ಕಾಂ ಇರಲಿದ್ದು, ಭವಾನೀ ಶಂಕರ ದೇವರ ಪೂಜೆ, ಸ್ವಾಮೀಜಿಗೆ ಭಿಕ್ಷಾ ಪ್ರದಾನ, ಪಾದ್ಯಪೂಜೆ ಇತ್ಯಾದಿಗಳು ಡೆಯಲಿವೆ ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕೈವಲ್ಯ ಶಾಖಾ ಮಠದ ಅ್ಯಕ್ಷಸಂತೋಷ್ವಾಗ್ಳೆ,ರಮೇಶ್ಸಾಲ್ವಂಕಾರ್, ಶಶಿರ ವಾಗ್ಳೆ, ನಿತ್ಯಾನಂದ ನಾಯಕ್, ಉಪೇಂದ್ರ ನಾಯಕ್ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News