ಮಾರ್ಷಲ್ ಆರ್ಟ್ಸ್‌ನಲ್ಲಿ ಚಿನ್ನದ ಪದಕ
Update: 2021-12-08 18:17 IST
ಉಡುಪಿ, ಡಿ.8: ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಥಮ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ದೀಕ್ಷಾ ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ಮಾರ್ಷಲ್ ಆರ್ಟ್ಸ್ ಸ್ಪರ್ಧೆಯಲ್ಲಿ ಪ್ಪಾಂಸೇಯಲ್ಲಿ ಪ್ರಥಮ ಹಾಗೂ ಕ್ಯೋರುಗಿಯಲ್ಲಿ ಪ್ರಥಮ ಸೇರಿದಂತೆ ಒಟ್ಟು ಎರಡು ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ.
ಇವರು ಸಮಾಜ ಕಲ್ಯಾಣ ಇಲಾಖೆ ವಾಹನ ಚಾಲಕ ದಾಮೋದರ್ ಹಾಗೂ ಶಕುಂತಳಾ ದಂಪತಿಯ ಪುತ್ರಿ. ಮಾರ್ಷಲ್ ಆರ್ಟ್ಸ್ ಶಿಕ್ಷಕ ರಾಜಶೇಖರ್ ಹಾಗೂ ಕರಾಟೆ ಶಿಕ್ಷಕ ಚಂದ್ರಹಾಸ್ ಇವರಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ.