ಉದ್ಯಾವರ ಯುಎಫ್‌ಸಿ ಅಧ್ಯಕ್ಷರಾಗಿ ರಿಯಾಝ್ ಪಳ್ಳಿ ಆಯ್ಕೆ
Update: 2021-12-08 19:20 IST
ಉಡುಪಿ, ಡಿ. 8: ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಇದರ 2021-22ನೇ ಸಾಲಿನ ಅಧ್ಯಕ್ಷರಾಗಿ ಗ್ರಾಪಂ ಸದಸ್ಯ ರಿಯಾಝ್ ಪಳ್ಳಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ತಿಲಕ್ ರಾಜ್ ಸಾಲ್ಯಾನ್ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಉದ್ಯಾವರ ನಾಗೇಶ್ ಕುಮಾರ್, ಉಪಾಧ್ಯಕ್ಷರಾಗಿ ಸೋಮಶೇಖರ ಸುರತ್ಕಲ್, ಮೇರಿ ಡಿಸೋಜ, ಕಾರ್ಯದರ್ಶಿಯಾಗಿ ಸುಗಂಧಿ ಶೇಖರ್, ಮಹಮ್ಮದ್ ಆಸಿಫ್, ಕೋಶಾಧಿಕಾರಿಗಳಾಗಿ ಗಿರೀಶ್ ಗುಡ್ಡೆ ಯಂಗಡಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಶ್ರೀಧರ ಗಣೇಶ್‌ನಗರ, ಸಂಘಟನಾ ಕಾರ್ಯದರ್ಶಿಗಳಾಗಿ ಯು.ಆರ್.ಚಂದ್ರಶೇಖರ್, ಮಹಮ್ಮದ್ ಅಲಿ, ಆಂತರಿಕ ಲೆಕ್ಕ ಪರಿಶೋಧಕರಾಗಿ ಹಬೀಬ್ ಪಳ್ಳಿ, ನಿರ್ದೇಶಕರಾಗಿ ಅಬ್ದುಲ್ ಜಲೀಲ್ ಸಾಹೇಬ್, ಮಹಮ್ಮದ್ ನಯಾಝ್, ಜಾರ್ಜ್ ಫೆರ್ನಾಂಡಿಸ್, ಚಂದ್ರಾವತಿ ಎಸ್.ಭಂಡಾರಿ, ಯು.ಪಧ್ಮನಾಭ ಕಾಮತ್, ಶರತ್ ಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು.