ಭಾರತೀಯ ಕ್ರಿಕೆಟ್‌ ತಂಡದ ಏಕದಿನ, ಟಿ-ಟ್ವೆಂಟಿ ನಾಯಕ ಸ್ಥಾನಕ್ಕೆ ರೋಹಿತ್‌ ಶರ್ಮ ಆಯ್ಕೆ

Update: 2021-12-08 14:06 GMT

ಹೊಸದಿಲ್ಲಿ: ರೋಹಿತ್ ಶರ್ಮಾ ಅವರನ್ನು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳ ಟೀಂ ಇಂಡಿಯಾ ನಾಯಕನಾಗಿ ಬುಧವಾರ ನೇಮಕ ಮಾಡಲಾಗಿದ್ದು, ವಿರಾಟ್ ಕೊಹ್ಲಿಯಿಂದ ತೆರವಾದ ಸ್ಥಾನವನ್ನು ರೋಹಿತ್‌ ಶರ್ಮಾ ವಹಿಸಿಕೊಳ್ಳಲಿದ್ದಾರೆ. ಈ ಕುರಿತು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಮಾಹಿತಿ ನೀಡಿದೆ.

ಆರಂಭಿಕ ಬ್ಯಾಟ್ಸ್‌ ಮನ್ ಅಜಿಂಕ್ಯ ರಹಾನೆ ಬದಲಿಗೆ ಟೆಸ್ಟ್‌‌ ಕ್ರಿಕೆಟ್‌ ತಂಡದ ಉಪನಾಯಕನಾಗಿಯೂ ರೋಹಿತ್‌ ರನ್ನು ಹೆಸರಿಸಲಾಗಿದೆ. ರೋಹಿತ್ ಕಳೆದ ತಿಂಗಳು ನ್ಯೂಜಿಲೆಂಡ್ ವಿರುದ್ಧದ ಸ್ವದೇಶಿ ಸರಣಿಗೆ T20I ತಂಡದ ನಾಯಕರಾಗಿ ನೇಮಕಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News