×
Ad

ಕ್ಷೌರಿಕನ ದುಡಿಮೆಯ ಉಳಿತಾಯ ಹಣ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಶಾಲೆಗೆ ದೇಣಿಗೆ

Update: 2021-12-08 19:59 IST

ಉಡುಪಿ, ಡಿ.8: ಆದಿ ಉಡುಪಿಯ ಕ್ಷೌರಿಕರೊಬ್ಬರು ತನ್ನ ದುಡಿಮೆಯಲ್ಲಿ ಉಳಿತಾಯ ಮಾಡಿದ ಹಣವನ್ನು ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರ ಶಾಲೆಗೆ ದೇಣಿಗೆಯಾಗಿ ನೀಡಿದ್ದಾರೆ.

ಆದಿಉಡುಪಿಯ ಗೌರವ್ ಸೆಲೂನಿನ ಮಾಲಕ ಸತೀಶ್ ಸುವರ್ಣ, ತನ್ನ ದುಡಿಮೆಯಲ್ಲಿ 2220ರೂ. ಉಳಿತಾಯ ಮಾಡಿದ್ದು, ಆ ಹಣವನ್ನು ಮಂಗಳವಾರ ಹರೇಕಳ ನ್ಯೂ ಪಡ್ಟುವಿನಲ್ಲಿರುವ ಶಾಲೆಗೆ ಭೇಟಿ ನೀಡಿ, ಹಾಜಬ್ಬ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಶಾಲಾ ಶಿಕ್ಷಕಿ ಸುಷಿಮ್ ಶೆಟ್ಟಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News