×
Ad

ಮನೆಗೆ ನುಗ್ಗಿ ನಗನಗದು ಕಳವು

Update: 2021-12-08 20:08 IST

ಮಣಿಪಾಲ, ಡಿ.8: ಇಂದ್ರಾಳಿಯ ಗೋಡನ್ ರಸ್ತೆಯಲ್ಲಿರುವ ಬಾಡಿಗೆ ಮನೆಗೆ ಡಿ.7ರಂದು ನುಗ್ಗಿದ ಕಳ್ಳರು ಸಾವಿರಾರು ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.

ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕು ಮೂಲದ ಶ್ರೀಶೈಲಪ್ಪ ಎಂಬವರು ವಾಸ ಮಾಡುವ ಬಾಡಿಗೆ ಮನೆಯ ಬಾಗಿಲಿನ ಬೀಗ ಮುರಿದು ಒಳಗೆ ಪ್ರವೇಶಿಸಿದ ಕಳ್ಳರು, ಕೋಣೆಯಲ್ಲಿದ್ದ ಕಬ್ಬಿಣ ಟ್ರಂಕ್‌ ನಲ್ಲಿಟ್ಟಿದ್ದ ಚಿನ್ನದ ಉಂಗುರ, ಚಿನ್ನದ ಸರ, ಚಿನ್ನದ ಎರಡು ಜೊತೆ ಮಕ್ಕಳ ಬೆಂಡೊಲೆ ಮತ್ತು ಜುಮ್ಕಿ, 1 ಜೊತೆ ಚಿನ್ನದ ಜುಮ್ಕಿ ಹಾಗೂ ಪರ್ಸ್‌ನಲ್ಲಿಟ್ಟಿದ್ದ 25000ರೂ. ನಗದು ಕಳವು ಮಾಡಿಕೊಂಡು ಹೋಗಿದ್ದಾರೆ. ಇವುಗಳ ಒಟ್ಟು ಮೌಲ್ಯ 71,500ರೂ. ಎಂದು ಅಂದಾಜಿಸಲಾಗಿದೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News