ಕಡಿಯಾಳಿ ದೇವಸ್ಥಾನದವರಿಂದ ಅನ್ಯಾಯ ಆರೋಪ : ಪ್ರಕರಣ ದಾಖಲು
Update: 2021-12-08 20:11 IST
ಉಡುಪಿ, ಡಿ.8: ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದದವರು ಪೋರ್ಜರಿ ಸಹಿ ಮಾಡಿ ಮಾಹಿತಿ ಆಯೋಗದಲ್ಲಿ ವಿಚಾರಣಾ ಹಂತದಲ್ಲಿದ್ದ ಪ್ರಕರಣವನ್ನು ಮುಕ್ತಾಯ ಮಾಡಿ ಅನ್ಯಾಯ, ಮೋಸ ಮಾಡಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಡಿಯಾಳಿ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಗಣೇಶ್ ರಾವ್, ಗುಮಾಸ್ತ ಗಂಗಾಧರ ಹೆಗ್ಡೆ, ಮುರಳಿಕೃಷ್ಣ ಉಪಾಧ್ಯ(65), ಕೆ.ಹರಿ ಉಪಾಧ್ಯ(72) ಎಂಬವರು ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನ ದಲ್ಲಿ ಅಪರಾಧಿಕ ಒಳಸಂಚು ಮಾಡಿಕೊಂಡು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಕೆ.ಶ್ರೀಶ ಉಪಾಧ್ಯ ಅವರ ಸಹಿಯನ್ನು ಪೋರ್ಜರಿ ಮಾಡಿ, ಮಾಹಿತಿ ಆಯೋಗ ದಲ್ಲಿ ವಿಚಾರಣಾ ಹಂತದಲ್ಲಿದ್ದ ಪ್ರಕರಣವನ್ನು ಮುಕ್ತಾಯ ಮಾಡಿ ಅನ್ಯಾಯ, ಮೋಸ ಮಾಡಿರುವುದಾಗಿ ದೂರಲಾಗಿದೆ.