ಮೆಸ್ಕಾಂ ಕಿರಿಯ ಪವರ್ ಮ್ಯಾನ್ ಆತ್ಮಹತ್ಯೆ
Update: 2021-12-08 20:14 IST
ಬ್ರಹ್ಮಾವರ, ಡಿ.8: ಹೆಗ್ಗುಂಜೆ ಮೆಸ್ಕಾಂ ಶಾಖೆಯಲ್ಲಿ ಕಿರಿಯ ಪವರ್ ಮ್ಯಾನ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪೆಜಮಂಗೂರು ಗ್ರಾಮದ ಕೊಕ್ಕರ್ಣೆ ಎಂಬಲ್ಲಿ ಡಿ.7ರಂದು ರಾತ್ರಿ ವೇಳೆ ನಡೆದಿದೆ.
ಮೃತರನ್ನು ಬಾಗಲಕೋಟೆ ಮೂಲದ ಶ್ರೀನಿವಾಸ ನಾಗಮೋತಿ(25) ಎಂದು ಗುರುತಿಸಲಾಗಿದೆ.
ಇವರು ಕೊಕ್ಕರ್ಣೆಯ ಲಕ್ಷ್ಮೀ ಗಾಣಿಗ ಎಂಬವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ವಿಪರೀತ ಮದ್ಯ ಸೇವಿಸುವ ಚಟ ಹೊಂದಿದ್ದ ಇವರು, ಮಾನಸಿಕವಾಗಿ ನೊಂದು ಜೀವನದಲ್ಲಿ ಜೀಗುಪ್ಸೆಗೊಂಡು ಬಾಡಿಗೆ ಮನೆಯ ರೂಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.