ಪ್ರತ್ಯೇಕ ಪ್ರಕರಣ: ಎರಡು ದ್ವಿಚಕ್ರ ವಾಹನ ಕಳವು
Update: 2021-12-08 20:24 IST
ಮಂಗಳೂರು, ಡಿ. 8: ಮಂಗಳೂರು ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಎರಡು ಕಡೆ ಪಾರ್ಕ್ ಮಾಡಲಾಗಿದ್ದ ದ್ವಿಚಕ್ರ ವಾಹನ ವನ್ನು ಕಳವುಗೈದ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಂಕನಾಡಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಪ್ಪಿನಮೊಗರು ಕಡೇಕಾರ್ ರಾಷ್ಟ್ರೀಯ ಹೆದ್ದಾರಿಯ ಬದಿ ನ.28ರಂದು ಸಂಜೆ 6 ಗಂಟೆಗೆ ಸಂಪತ್ ಕುಕ್ಯಾನ್ ಬೈಕ್ ನಿಲ್ಲಿಸಿ ಹೋಗಿದ್ದರು. ಮರುದಿನ ಬೆಳಗ್ಗೆ 8 ಗಂಟೆಗೆ ಬಂದು ನೋಡುವಾಗ ಕಳವಾಗಿರುವುದು ಗಮನಕ್ಕೆ ಬಂದಿದೆ. ಈ ಬೈಕ್‌ನ ಮೌಲ್ಯ 30,000 ರೂ. ಎಂದು ಅಂದಾಜಿಸಿ ಪೊಲೀಸರಿಗೆ ದೂರು ನೀಡಲಾಗಿದೆ.
ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಓಲ್ಡ್‌ಕೆಂಟ್ ರಸ್ತೆಯ ಅಂಗಡಿಯೊಂದರ ಬಳಿ ತಿಮಣ್ಣ ಯಲ್ಲಪ್ಪ ಹೆಬ್ಬಾಳ್ ನ.28ರ ರಾತ್ರಿ 1 ಗಂಟೆಗೆ ನಿಲ್ಲಿಸಿಟ್ಟಿದ್ದ ದ್ವಿಚಕ್ರ ವಾಹನ 10 ನಿಮಿಷಗಳ ಅವಧಿಯಲ್ಲಿ ಕಳವಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ದ್ವಿಚಕ್ರ ವಾಹನದ ಮೌಲ್ಯ 30,000 ರೂ. ಎಂದು ಅಂದಾಜಿಸಲಾಗಿದೆ.