×
Ad

ಕೋಡಿ; ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿ ಸೇರಿ ಇಬ್ಬರಿಗೆ ಹಲ್ಲೆ : ದೂರು

Update: 2021-12-08 21:03 IST

ಕುಂದಾಪುರ, ಡಿ.8: ಕ್ಷುಲ್ಲಕ ಕಾರಣಕ್ಕಾಗಿ ವಿದ್ಯಾರ್ಥಿ ಸೇರಿದಂತೆ ಇಬ್ಬರಿಗೆ ಹಲ್ಲೆ ನಡೆಸಿರುವ ಘಟನೆ ಕೋಡಿ ಚಕ್ರೇಶ್ವರಿ ದೇವಸ್ಥಾನದ ಸಮೀಪ ಬುಧವಾರ ಮಧ್ಯಾಹ್ನ  ನಡೆದಿದೆ.

ಹಲ್ಲೆಗೆ ಒಳಗಾದ ಮೂಡುಗೋಪಾಡಿಯ ಜುನೈದ್ (21) ಹಾಗೂ ಕಾಲೇಜು ವಿದ್ಯಾರ್ಥಿ ಮುಹಮ್ಮದ್ ಬಾತೀಶ್ (18) ಎಂಬವರು ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕುಂದಾಪುರ ಚರ್ಚ್ ರೋಡಿನಿಂದ ಕೋಡಿ ಕಡೆ ಹೋಗುತ್ತಿದ್ದ ಜುನೈದ್ ಚಲಾಯಿಸುತ್ತಿದ್ದ ಕೋಳಿ ಮಾಂಸ ಲೈನ್‌ಸೇಲ್ ಮಾಡುವ ವಾಹನ ರಸ್ತೆ ಮಧ್ಯೆ ಬಂದ್ ಬಿತ್ತೆನ್ನಲಾಗಿದೆ. ಇದೇ ವೇಳೆ ಸ್ಥಳಕ್ಕೆ ಆಗಮಿಸಿದ ಕೋಡಿಯ ಗಿರೀಶ್ ಎಂಬಾತ ವಾಹನವನ್ನು ಬದಿಗೆ ನಿಲ್ಲಿಸಲು ಹೇಳಿದನು. ಅದಕ್ಕೆ ಜುನೈದ್, ವಾಹನ ದೂಡಿ ಸಹಾಯ ಮಾಡುವಂತೆ ಗಿರೀಶ್‌ನಲ್ಲಿ ಕೇಳಿಕೊಂಡಿದ್ದ ಎನ್ನಲಾಗಿದೆ.

ಇದೇ ವಿಚಾರದಲ್ಲಿ ಕೋಪಗೊಂಡ ಗಿರೀಶ್ ಹಾಗೂ ಆತನ ಗೆಳೆಯ ಜಿತೇಂದ್ರ, ಜುನೈದ್ ಗೆ ಅವಾಚ್ಯ ಶಬ್ದಗಳಿಂದ ಬೈದು ಬಾಟ್ಲಿಯಿಂದ ಹಲ್ಲೆ ಮಾಡಿದ್ದಾರೆ. ಈ ವೇಳೆ ಬಿಡಿಸಲು ಬಂದ ಬಾತೀಶ್ ಮೇಲೂ ಹಲ್ಲೆ ಮಾಡಲಾಗಿದೆ ಎಂದು ದೂರಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News