×
Ad

ಸಮಗ್ರ ರಾಷ್ಟ್ರೀಯ ದತ್ತಾಂಶದಡಿ ಚಮ್ಮಾರ ಕಾರ್ಮಿಕರ ನೋಂದಣಿ

Update: 2021-12-08 22:05 IST

ಉಡುಪಿ, ಡಿ.8: ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದ, ಅಸಂಘಟಿತ ಕಾರ್ಮಿಕರ ವರ್ಗದಡಿಯಲ್ಲಿ ಬರುವ ಚಮ್ಮಾರ ಕಾರ್ಮಿಕರ ದತ್ತಾಂಶವನ್ನು ಕೇಂದ್ರ ಸರ್ಕಾರದ ಅಸಂಘಟಿತ ಕಾರ್ಮಿಕರ ಸಮಗ್ರ ರಾಷ್ಟ್ರೀಯ ದತ್ತಾಂಶದಡಿ ಕ್ರೊಢೀಕರಿಸಲು ನೋಂದಾವಣೆ ಪ್ರಾರಂಭಿಸಲಾಗಿದ್ದು, ಜಿಲ್ಲೆಯ 18ರಿಂದ 59 ವರ್ಷದೊಳಗಿನ ಇಎಸ್‌ಐ ಮತ್ತು ಪಿಎಫ್ ಸೌಲಭ್ಯ ಹೊಂದಿರದ ಹಾಗೂ ಆದಾಯ ತೆರಿಗೆ ಪಾವತಿಸದ ಅಸಂಘಟಿತ ವಲಯದ ಚಮ್ಮಾರ ಕಾರ್ಮಿಕರು ಸೇವಾಕೇಂದ್ರಗಳ ಮೂಲಕ ಅಥವಾ ಸ್ವಯಂ ಆಗಿ -www.eshram.gov.in- ಮೂಲಕ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಸಹಾಯವಾಣಿ-155214, ಇ-ಶ್ರಮ್ ಸಹಾಯವಾಣಿ 14434 ಅಥವಾ ಜಿಲ್ಲಾ ಸಂಯೋಜಕರು, ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ, ಉಡುಪಿ ಮೊ.ನಂ: 6362891017ಅನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News