ಉಡುಪಿ ಜಿಲ್ಲಾ ಅತ್ಯುತ್ತಮ ಯುವ ಮಂಡಳ ಪ್ರಶಸ್ತಿಗೆ ಆಯ್ಕೆ
Update: 2021-12-08 22:07 IST
ಉಡುಪಿ, ಡಿ.8: ಕೇಂದ್ರ ಸರಕಾರದ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯದ ನೆಹರು ಯುವ ಕೇಂದ್ರ ಸಂಘಟನೆ ಉಡುಪಿ ವತಿಯಿಂದ ನೀಡಲಾಗುವ ಜಿಲ್ಲಾ ಅತ್ಯುತ್ತಮ ಯುವ ಮಂಡಳದ 2020-21 ನೇ ಸಾಲಿನ ಪ್ರಶಸ್ತಿಗೆ ಹೆಬ್ರಿ ತಾಲೂಕು ಕುಚ್ಚೂರು ಕುಡಿಬೈಲು ‘ಶಾಂತಿನಿಕೇತನ ಯುವವೃಂದ ಮಂಡಳಿ’ ಆಯ್ಕೆಯಾಗಿದೆ.
ಪ್ರಶಸ್ತಿಯು 25 ಸಾವಿರ ರೂ. ನಗದು ಹಾಗೂ ಪ್ರಶಂಸಾ ಪತ್ರವನ್ನು ಒಳ ಗೊಂಡಿದೆ. ಜನವರಿಯಲ್ಲಿ ನಡೆಯುವ ಜಿಲ್ಲಾ ಮಟ್ಟದ ಯುವ ಸಮಾವೇಶದಲ್ಲಿ ಪ್ರಶಸ್ತಿಯನ್ನು ತರಿಸಲಾಗುವುದು ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.