ಜರ್ಮನ್ ಛಾನ್ಸಲರ್ ಆಗಿ ಒಲಾಫ್ ಶೋಲ್ಜ್ ಪ್ರಮಾಣ ವಚನ

Update: 2021-12-09 12:48 GMT

 ಒಲಾಫ್ ಶೋಲ್ಜ್(photo:twitter/@OlafScholz)

ಬರ್ಲಿನ್, ಡಿ.8: ಜರ್ಮನಿಯ ಛಾನ್ಸಲರ್ ಆಗಿ ಒಲಾಫ್ ಶೋಲ್ಜ್ ಪ್ರಮಾಣವಚನ ಸ್ವೀಕರಿಸಿದ್ದು, ಏಂಜೆಲಾ ಮರ್ಕೆಲ್ ನೇತೃತ್ವದ 16 ವರ್ಷದ ಕನ್ಸರ್ವೇಟಿವ್ ಪಕ್ಷದ ಆಡಳಿತಕ್ಕೆ ಅಂತ್ಯ ಹಾಡಿದ್ದಾರೆ.

ಅಲ್ಲದೆ ಹಸಿರು ಹೂಡಿಕೆಗೆ ಉತ್ತೇಜನ ನೀಡುವುದಾಗಿ ಭರವಸೆ ನೀಡಿರುವ, ಯುರೋಪ್ ಪರವಾಗಿರುವ ಮೈತ್ರಿ ಸರಕಾರದ ಆಡಳಿತಕ್ಕೆ ಈ ಮೂಲಕ ದಾರಿ ಮಾಡಿಕೊಟ್ಟಂತಾಗಿದೆ. ನಿರ್ಗಮಿತ ಸರಕಾರದಲ್ಲಿ ಉಪ ಛಾನ್ಸೆಲರ್ ಮತ್ತು ವಿತ್ತಸಚಿವೆಯಾಗಿ ಕಾರ್ಯನಿರ್ವಹಿಸಿದ್ದ 63 ವರ್ಷದ ಶೋಲ್ಜ್ ಜರ್ಮನ್ ಸಂಸತ್ತಿನ ಕೆಳಮನೆಯ(ರಾಜ್ಯಸಭೆ) 395 ಸದಸ್ಯರ ಬೆಂಬಲ ಪಡೆಯುವ ಮೂಲಕ ಸ್ಪಷ್ಟ ಬಹುಮತ ಸಾಧಿಸಿದ್ದಾರೆ ಎಂದು ರಾಜ್ಯಸಭೆ ಅಧ್ಯಕ್ಷ ಬಾರ್ಬೆಲ್ ಬಾಸ್ ಘೋಷಿಸಿದ್ದಾರೆ. ಜರ್ಮನಿಯ ಅಧ್ಯಕ್ಷರು ಶೋಲ್ಜ್‌ರನ್ನು ಛಾನ್ಸಲರ್ ಎಂದು ಅಧಿಕೃತವಾಗಿ ಘೋಷಿಸಿದ ಬಳಿಕ ಸಂಸತ್ತಿನ ಸ್ಪೀಕರ್ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.

ಸಂಸತ್ತಿನ ಸದಸ್ಯೆಯಾಗಿರದ ಮರ್ಕೆಲ್, ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ಪ್ರಮಾಣವಚನ ಕಾರ್ಯಕ್ರಮ ವೀಕ್ಷಿಸಿದರು. ಮುಂದಿನ ರಾಜಕೀಯ ಬದುಕಿನ ಬಗ್ಗೆ ಈಗ ಏನನ್ನೂ ನಿರ್ಧರಿಸಿಲ್ಲ ಎಂದು ಮರ್ಕೆಲ್ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News