ಉಡುಪಿ: ಹುತಾತ್ಮ ಜ.ಬಿಪಿನ್ ರಾವತ್‌ಗೆ ಗೌರವ ನಮನ

Update: 2021-12-09 13:45 GMT

ಉಡುಪಿ, ಡಿ.9: ಸೇನಾ ಹೆಲಿಕಾಪ್ಟರ್ ಅಪಘಾತದಲ್ಲಿ ಹುತಾತ್ಮರಾದ ದೇಶದ ಮೂರು ಸಶಸ್ತ್ರ ಪಡೆಗಳ ಮೊತ್ತ ಮೊದಲ ಮುಖ್ಯಸ್ಥ ಜ.ಬಿಪಿನ್ ರಾವತ್ ಅವರಿಗೆ ಉಡುಪಿ ಅಜ್ಜರಕಾಡು ಹುತಾತ್ಮ ಸೈನಿಕರ ಯುದ್ಧ ಸ್ಮಾರಕದಲ್ಲಿ ಗುರುವಾರ ಗೌರವ ನಮನ ಸಲ್ಲಿಸಲಾಯಿತು.

ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಮಾತನಾಡಿ, ಬಿಪಿನ್ ರಾವತ್ ಸಾವನ್ನಪ್ಪಿರುವುದು ದುಃಖ ತಂದಿದೆ. ಘಟನೆಯಲ್ಲಿ ಹುತಾತ್ಮರಾದ ಯೋಧರಿಗೆ ಸದ್ಗತಿ ಪ್ರಾಪ್ತಿಯಾಗಲಿ ಎಂದರು.

ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಘಟನೆಯಲ್ಲಿ ಹುತಾತ್ಮರಾದವರಿಗೆ ಶ್ರದ್ಧಾಂಜಲಿ ಅರ್ಪಿಸುವುದು ಭಾರತದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯವಾಗಿದೆ. ಸಿಡಿಎಸ್ ಆಗಿ ಬಿಪಿನ್ ಅವರು ಅರ್ಹ ವ್ಯಕ್ತಿಯಾಗಿದ್ದರು. ಈ ಕಾರಣದಿಂದಲೇ ಅವರನ್ನು ಪ್ರಧಾನಿಯವರು ಮುಖ್ಯಸ್ಥರನ್ನಾಗಿ ನೇಮಕ ಮಾಡಿದ್ದರು. ಅವರ ಕುಟುಂಬವೇ ಸೈನಿಕ ಕುಟುಂಬದಿಂದ ಬಂದವರಾಗಿದ್ದರು. ಸೇನೆಯಲ್ಲಿ ವಿವಿಧ ರೀತಿಯ ಹುದ್ದೆ ನಿರ್ವಹಿಸುವುದರ ಜತೆಗೆ ಸರ್ಜಿಕಲ್ ಸ್ಟ್ರೈಕ್‌ನ ರುವಾರಿ ಯಾಗಿದ್ದರು ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಉಡುಪಿ ನಗರಾಭಿ ವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ, ಸಿಸ್ಟರ್ ಪ್ರೀತಿ ಕ್ರಾಸ್ತಾ, ಕಾರ್ಯ ಕ್ರಮದ ರುವಾರಿ ಹಾಗೂ ಭಾರ್ಗವ ಪ್ರತಿಷ್ಠಾನದ ಸಂಚಾಲಕ ಎಂ.ರಾಮ್ ದಾಸ್ ಭಟ್, ಶರ್ಮಾ ರಾಮ್‌ದಾಸ್, ವಂದನಾ ಶೆಣೈ, ಟಿ.ಜಿ.ಹೆಗಡೆ ಮೊದ ಲಾದವರು ಉಪಸ್ಥಿತರಿದ್ದರು.

ಪೂರ್ಣಪ್ರಜ್ಞಾ ಕಾಲೇಜಿನ ಉಪಪ್ರಾಂಶುಪಾಲ ವಿನಾಯಕ್ ಪೈ ಪ್ರಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News