×
Ad

ನಾಪತ್ತೆಯಾಗಿರುವ ಯುವಕನ ಬೈಕ್ ಗುರುಪುರ ಸೇತುವೆಯಲ್ಲಿ ಪತ್ತೆ

Update: 2021-12-09 19:48 IST

ಮಂಗಳೂರು, ಡಿ.9: ನಗರ ಹೊರವಲಯದ ವಾಮಂಜೂರಿನ ಯುವಕನೊಬ್ಬ ಬುಧವಾರ ಸಂಜೆಯಿಂದ ದಿಢೀರ್ ನಾಪತ್ತೆಯಾಗಿದ್ದು, ಆತ ಚಲಾಯಿಸುತ್ತಿದ್ದ ಬೈಕ್ ಗುರುಪುರ ಸೇತುವೆಯಲ್ಲಿ ಗುರುವಾರ ಪತ್ತೆಯಾಗಿದೆ. ಅದರಂತೆ ಅಗ್ನಿಶಾಮಕ ದಳ ಮತ್ತು ಬಜ್ಪೆ ಪೊಲೀಸರು ಸ್ಥಳೀಯರ ಸಹಕಾರದೊಂದಿಗೆ ಗುರುಪುರ ನದಿಯಲ್ಲಿ ದಿನವಿಡೀ ಹುಡುಕಾಟ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ವಾಮಂಜೂರಿನ ಶ್ರೀ ರಾಮಭಜನಾ ಮಂದಿರ ಸಮೀಪದ ಯೋಗೀಶ್ (31) ನಾಪತ್ತೆಯಾದ ಯುವಕ. ಅವಿವಾಹಿತನಾದ ಈತ ವೃತ್ತಿಯಲ್ಲಿ ಚಾಲಕನಾಗಿದ್ದು, ಬುಧವಾರ ಸಂಜೆಯಿಂದ ನಾಪತ್ತೆಯಾಗಿದ್ದ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿತ್ತು.

ಈ ಮಧ್ಯೆ ಬುಧವಾರ ರಾತ್ರಿಯ ವೇಳೆಗೆ ಬೈಕೊಂದು ಗುರುಪುರ ಸೇತುವೆಯಲ್ಲಿ ಅನಾಥ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಗುರುವಾರ ಬೆಳಗ್ಗೆ ಅದು ವಾಮಂಜೂರಿನಿಂದ ನಾಪತ್ತೆಯಾಗಿದ್ದ ಯೋಗೀಶ್‌ನದ್ದೆಂದು ಹೇಳಲಾಗಿದೆ. ಆ ಹಿನ್ನೆಲೆಯಲ್ಲಿ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ವರ್ಗವು ಗುರುವಾರವಿಡೀ ನದಿಯಲ್ಲಿ ಹುಡುಕಾಡಿದೆ. ಆದರೆ, ರಾತ್ರಿಯವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News