ಕೋಡಿಬೆಂಗ್ರೆ ಬೋಟ್ ಹೌಸ್‌ನಲ್ಲಿ ಮಹಿಳಾ ಮೋರ್ಚಾದ ಸಭೆ
ಉಡುಪಿ, ಡಿ.9: ಉಡುಪಿ-ಮಲ್ಪೆ ಕಡಲ ತೀರದ ಕೋಡಿ ಬೆಂಗ್ರೆ ಬೋಟ್ ಹೌಸ್ನಲ್ಲಿ ಡಿ.8ರಂದು ಆಯೋಜಿಸಲಾದ ಬಿಜೆಪಿ ಉಡುಪಿ ಜಿಲ್ಲಾ ಮಹಿಳಾ ಮೋರ್ಚಾದ ವಿಶೇಷ ಕಾರ್ಯಕಾರಿಣಿ ಸಭೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಉದ್ಘಾಟಿಸಿದರು.
ಅಧ್ಯಕ್ಷತೆಯನ್ನು ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್.ಶೆಟ್ಟಿ ವಹಿಸಿದ್ದರು. ಈ ಸಂದರ್ಭದಲ್ಲಿ ಮಹಿಳಾ ಮೋರ್ಚಾ ಜಿಲ್ಲಾ ಪ್ರಭಾರಿ ಸುನೀತಾ ಜಗದೀಶ್ ಚಿಕ್ಕಮಗಳೂರು, ಮೀನುಗಾರಿಕಾ ನಿಗಮದ ಸದಸ್ಯೆ ಗೀತಾಂಜಲಿ ಸುವರ್ಣ, ರಾಷ್ಟ್ರೀಯ ಈಜುಪಟು ವಿದ್ಯಾ ಪೈ, ಹೆಬ್ರಿ ಅಕ್ರಮ ಸಕ್ರಮ ಸಮಿತಿ ಸದಸ್ಯೆ ಪ್ರಮೀಳಾ ಹರೀಶ್, ಬನ್ನಂಜೆ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯೆ ಅಶ್ವಿನಿ ಶೆಟ್ಟ್ಟಿ, ಇಂದ್ರಾಣಿ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯೆ ಸುಜಾಲಾ ಸತೀಶ್ ಅವರನ್ನು ಸನ್ಮಾನಿಸಲಾಯಿತು.
ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯ ದರ್ಶಿ ಯಶ್ಪಾಲ್ ಎ.ಸುವರ್ಣ, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯ ದರ್ಶಿ ಶಿಲ್ಪಾ ಜಿ.ಸುವರ್ಣ, ಬಿಜಿಪಿ ಜಿಲ್ಲಾ ಉಪಾಧ್ಯಕ್ಷೆ ಸವಿತಾ ಶಿವಾನಂದ ಕೋಟ್ಯಾನ್, ಜಿಲ್ಲಾ ಸಹ ವಕ್ತಾರ ಶಿವಕುಮಾರ್ ಅಂಬಲಪಾಡಿ, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ದಾವೂದ್ ಅಬೂಬಕರ್, ಮಹಿಳಾ ಮೋರ್ಚಾದ ವಿವಿಧ ಮಂಡಲಗಳ ಅಧ್ಯಕ್ಷರಾದ ಸರೋಜ ಶೆಟ್ಟಿಗಾರ್ ಉಡುಪಿ ನಗರ, ಸುಮಾ ಶೆಟ್ಟಿ ಕಾಪು, ರೂಪಾ ಪೈ ಕುಂದಾಪುರ, ವಸಂತಿ ಸತೀಶ್ ಪೂಜಾರಿ ಉಡುಪಿ ಗ್ರಾಮಾಂತರ, ಮಾಲಿನಿ ಶೆಟ್ಟಿ ಕಾರ್ಕಳ ಉಪಸ್ಥಿತರಿದ್ದರು.
ಮೋರ್ಚಾ ಪ್ರಧಾನ ಕಾರ್ಯದರ್ಶಿ ರಶ್ಮಿತಾ ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಪ್ರಮೀಳಾ ಹರೀಶ್ ವಂದಿಸಿದರು.