ಕಾರಂತರ ಜೀವನ, ಕೃತಿಗಳ ಸಂಶೋಧನೆಗೆ ವ್ಯವಸ್ಥೆ: ಗುಜ್ಜಾಡಿ
ಕೋಟ, ಡಿ.9: ಡಾ.ಕೋಟ ಶಿವರಾಮ ಕಾರಂತರಿಗೆ ಮಕ್ಕಳೆಂದರೆ ಅತ್ಯಂತ ಪ್ರೀತಿ. ಮಕ್ಕಳ ಚಟುವಟಿಕೆಗಳನ್ನು ಅವರು ಸದಾ ಪ್ರೋತ್ಸಾಹ ನೀಡುತ್ತಿದ್ದರು. ಅದಕ್ಕಾಗಿ ಕಾರಂತರ ಸ್ಮೃತಿ ದಿನಾಚರಣೆ ಪ್ರಯುಕ್ತ ಸಾಲಿಗ್ರಾಮದ ಮಾನಸಾ ದಲ್ಲಿ ಮಕ್ಕಳಿಗೆ ಸಾಹಿತ್ಯ, ಯಕ್ಷಗಾನ, ಶಿಕ್ಷಣ ಮತ್ತು ಅದರ ಪ್ರಯೋಗಗಳನ್ನು ಮತ್ತೆ ನಡೆಸಬೇಕೆಂದು ತೀರ್ಮಾನಿಸಿದ್ದೇವೆ ಎಂದು ಡಾ.ಕೋಟ ಶಿವರಾಮ ಕಾರಂತ ಸಂಶೋಧನಾ ಮತ್ತು ಅಧ್ಯಯನ ಸಂಸ್ಥೆಯ ಟ್ರಸ್ಟಿ ಗುಜ್ಜಾಡಿ ಪ್ರಭಾಕರ್ ಎಂ.ನಾಯಕ್ ಹೇಳಿದ್ದಾರೆ.
ಡಾ.ಕೋಟ ಶಿವರಾಮ ಕಾರಂತ ಸಂಶೋಧನಾ ಮತ್ತು ಅಧ್ಯಯನ ಸಂಸ್ಥೆಯ ವತಿಯಿಂದ ಡಿ.9ರಂದು ನಡೆದ ಕಡಲತಡಿಯ ಭಾರ್ಗವ ಡಾ.ಕೋಟ ಶಿವರಾಮ ಕಾರಂತರ ಸ್ಮೃತಿ ದಿನಾಚರೆಯಲ್ಲಿ ಅವರು ಮಾತನಾಡುತಿದ್ದರು.
ಡಾ.ಕಾರಂತರ ಈ ಕಟ್ಟಡವನ್ನು ಯಥಾವರ್ತವಾಗಿ ಉಳಿಸಿಕೊಂಡು ಪುನರು ಜ್ಜೀವನಗೊಳಿಸಲಾಗುವುದು. ಇಲ್ಲಿ ಕಾರಂತರಿಗೆ ಸಂಬಂಧಿಸಿದ ವಸ್ತು ಸಂಗ್ರ ಹಾಲಯ ಮಕ್ಕಳಿಗೆ ಸಾಹಿತ್ಯದ ಬಗ್ಗೆ ಅರಿವು, ಯಕ್ಷಗಾನ ಕಲಿಕಾ ಕೇಂದ್ರ, ಭಜನೆ, ಹೆಣ್ಣು ಮಕ್ಕಳಿಗೆ ಕರಾಟೆ ತರಬೇತಿ ಹೀಗೆ ಮಕ್ಕಳು ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಪೂರಕ ವ್ಯವಸ್ಥೆಗಳನ್ನು ಮಾಡಲಾಗುವುದು. ಕಾರಂತರ ಜೀವನ ಮತ್ತು ಕೃತಿಗಳ ಬಗ್ಗೆ ಸಂಶೋಧನೆ ಮತ್ತು ಅಧ್ಯಯನದಲ್ಲಿ ತೊಡಗಿಕೊಳ್ಳಲು ವ್ಯವಸ್ಥೆಯನ್ನು ಮಾಡಲಾಗುವುದು. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಸತಿ ಹಾಗೂ ಪಿಎಚ್‌ಡಿ ಅಧ್ಯಯನಕ್ಕೆ ವ್ಯವಸ್ಥೆಯನ್ನು ಮಾಡಲಾಗುವುದು ಎಂದರು.
ಕಾರಂತರ ಸಹವರ್ತಿ ಮಾಲಿನಿ ಮಲ್ಯ ಕಾರಂತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಟ್ರಸ್ಟಿನ ಅಧ್ಯಕ್ಷ ಬಿ.ಎಂ.ಗುರುರಾಜ್ ರಾವ್, ಉಪಾಧ್ಯಕ್ಷ ಕಾರ್ಕಡ ನಾರಾಯಣ ಆಚಾರ್ಯ, ಕಾರ್ಯದರ್ಶಿ ಕೋಡಿ ಚಂದ್ರಶೇಖರ ನಾವಡ, ಜತೆ ಕಾರ್ಯದರ್ಶಿ ಶಶಿಕಲಾ ಅಡ್ವೆ, ಕೋಶಾಧಿಕಾರಿ ಬಿ.ಮಾಧವ ಪೈ, ವಿಶ್ವಸ್ಥರಾದ ಡಾ.ನಾರಾಯಣ ಶೈಣೆ, ಡಾ.ಎನ್.ವಿಶ್ವನಾಥ್ ಕಾಮತ್, ಸಂದೀಪ್ ಕುಮಾರ್ ಶೆಟ್ಟಿ, ಚೇಂಪಿ ಪೂಜಾ ಟ್ ಉಪಸ್ಥಿತರಿದ್ದರು.