×
Ad

ಡಿ.28ರಂದು ಬೀದಿಬದಿ ವ್ಯಾಪಾಸ್ಥರಿಂದ ನಗರಸಭೆಗೆ ಮುತ್ತಿಗೆ

Update: 2021-12-09 20:00 IST

ಉಡುಪಿ, ಡಿ.9: ಉಡುಪಿ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘ (ಸಿಐಟಿಯು)ದ ವತಿಯಿಂದ ಬೈಲೂರು ಕಾಂಪ್ಲೆಕ್ಸ್ ನ ಸಿಐಟಿಯು ಕಚೇರಿಯಲ್ಲಿ ಗುರುವಾರ ಸಭೆ ನಡೆಸಿ ಮುಂದಿನ ಹೋರಾಟ ಹಾಗೂ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಯಿತು.

ಡಿ.28ರಂದು ಉಡುಪಿ ಜಿಲ್ಲೆಯ ಎಲ್ಲಾ ಬೀದಿಬದಿ ಕೆಲಸ ಮಾಡುವ ಎಲ್ಲಾ ವರ್ಗದ ಜನರನ್ನು ಒಗ್ಗೂಡಿಸಿ ಸಮಾವೇಶ ನಡೆಸಿ ನಗರಸಭೆಗೆ ಮುತ್ತಿಗೆ ಹಾಕಲು ಸಭೆಯಲ್ಲಿ ನಿರ್ಧರಿಸಲಾಯಿತು. ಬಳಿಕ ಉಡುಪಿ ನಗರ ಸಭೆಯ ಪೌರಾಯುಕ್ತ ರಿಗೆ ಮನವಿ ಸಲ್ಲಿಸಿ ಹಲವಾರು ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು.

ನಿಯೋಗದಲ್ಲಿ ಬೀದಿ ಬದಿ ಸಂಘದ ಸಲಹೆಗಾರದ ಪಿ.ವಿಶ್ವನಾಥ ರೈ, ಗೌರವ ಅಧ್ಯಕ್ಷ ಕವಿರಾಜ್ ಎಸ್., ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಕಾರ್ಯದರ್ಶಿ ವೆಂಕಟೇಶ್ ಕೊಣಿ, ಸಿಐಟಿಯು ಜಿಲ್ಲಾ ಖಂಜಾಚಿ ಶಶಿಧರ್ ಗೊಲ್ಲ, ಬೀದಿ ಬದಿ ಸಂಘದ ಮುಖಂಡರಾದ ನಾಗರಾಜ, ತಿಮ್ಮನ ಗೌಡ, ನಿರುಪಾದಿ, ಅಶೋಕ, ರೆಡ್ಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News