×
Ad

ಕಾರ್ಕಳ: ಕ್ರೀಟಾಪಟು ರೋಹಿತ್ ಕುಮಾರ್, ಪತ್ರಕರ್ತೆ ರಾಜಲಕ್ಷ್ಮೀಗೆ ಅಭಿನಂದನಾ ಕಾರ್ಯಕ್ರಮ

Update: 2021-12-09 21:40 IST
ಪತ್ರಿಕಾಗೋಷ್ಠಿ

ಕಾರ್ಕಳ:  ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕ್ರೀಟಾಪಟು ರೋಹಿತ್ ಕುಮಾರ್ ಕಟೀಲ್ ಹಾಗು ಪತ್ರಕರ್ತೆ ಯು.ಬಿ ರಾಜಲಕ್ಷ್ಮೀ ಯವರಿಗೆ ಹುಟ್ಟೂರ ಅಭಿನಂದನಾ ಕಾರ್ಯಕ್ರಮ ಕಾರ್ಕಳದ ಕಟೀಲ್ ಇಂಟರ್ ನ್ಯಾಶನಲ್ ಬಳಿಯ  ಶಾಂಭವಿ ಫಾರ್ಮ್ ಹೌಸ್‍ನಲ್ಲಿ ನಡೆಯಲಿದೆ ಎಂದು ನ್ಯಾಯವಾದಿಗಳ ಸಂಘದ ಅಧ್ಯಕ್ಷ  ಸುನೀಲ್ ಕುಮಾರ್ ಶೆಟ್ಟಿ ತಿಳಿಸಿದರು.

ಕಾರ್ಕಳದ ಕಟೀಲ್ ಇಂಟರ್ ನ್ಯಾಶನಲ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ  ಮಾತನಾಡಿ ಸಚಿವ ಸುನೀಲ್ ಕುಮಾರ್,  ಹಿರಿಯ ನ್ಯಾಯವಾದಿ. ಕೆ. ವಿಜಯ ಕುಮಾರ್, ಆಳ್ವಾಸ್ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ , ಹಿರಿಯ ಉದ್ಯಮಿ ಪ್ರಭಾಕರ ಕಾಮತ್, ಕರ್ನಾಟಕ ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷ ಮಣಿರಾಜ ಶೆಟ್ಟಿ , ಭುವನೇಂದ್ರ ಕಾಲೇಜು ಪ್ರಾಂಶುಪಾಲ ಡಾ. ಮಂಜುನಾಥ ಕೋಟ್ಯಾನ್, ಬಿಲ್ಲವ ಸಮಾಜ ಅಧ್ಯಕ್ಷ  ಡಿ. ಆರ್. ರಾಜು, ಉದ್ಯಮಿಗಳಾದ ಕರಿಯಣ್ಣ ಶೆಟ್ಟಿ, ಶಿವರಾಮ ಶೆಟ್ಟಿ ಅಜೆಕಾರು , ಮಹೇಶ್ ಶೆಟ್ಟಿ, ಕುಡುಪುಲಾಜೆ , ಸಿನಿಮಾ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ , ಕನ್ನಡ ಚಲನಚಿತ್ರ ನಟಿಯರಾದ ದುನಿಯ ರಶ್ಮಿ, ಬಾವನಾ, ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಸಂಘಟಕರಾದ ಮಣಿರಾಜ್ ಶೆಟ್ಟಿ, ಚೇತನ್ ಶೆಟ್ಟಿ ಕೊರಳ, ಸುಭಿತ್ ಎನ್ ಆರ್, ಅವಿನಾಶ್ ಶೆಟ್ಟಿ,  ಹರ್ಮನ್ ಕ್ಯಾಸ್ಟಲಿನೋ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News