×
Ad

ಡಿ.10: ವಿಧಾನ ಪರಿಷತ್ ದ್ವಿಸದಸ್ಯ ಕ್ಷೇತ್ರಕ್ಕೆ ಚುನಾವಣೆ

Update: 2021-12-09 21:52 IST

ಮಂಗಳೂರು, ಡಿ.9: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯನ್ನು ಒಳಗೊಂಡ ಸ್ಥಳೀಯಾಡಳಿತದ ವಿಧಾನ ಪರಿಷತ್‌ನ ದ್ವಿ ಸದಸ್ಯತ್ವದ ಚುನಾವಣೆಯು ಡಿ.10ರಂದು ನಡೆಯಲಿದೆ. ಬೆಳಗ್ಗೆ 7ರಿಂದ ಸಂಜೆ 5ರವರೆಗೆ ದ.ಕ.ಜಿಲ್ಲೆಯ 231 ಮತ್ತು ಉಡುಪಿ ಜಿಲ್ಲೆಯ 158 ಸಹಿತ ಉಭಯ ಜಿಲ್ಲೆಗಳ 389 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ.

ಮತದಾನ ಸುಸೂತ್ರವಾಗಿ ನಡೆಸುವ ಸಲುವಾಗಿ ಚುನಾವಣಾಧಿಕಾರಿಯೂ ಆಗಿರುವ ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ನೇತೃತ್ವದಲ್ಲಿ ಎಲ್ಲಾ ಸಿದ್ಧತೆಗಳನ್ನು ನಡೆಸಲಾಗಿದೆ. 428 ಪಿಆರ್‌ಒ, 428 ಪಿಒ, 428 ಎಂಒ, 389 ವೀಡಿಯೋಗ್ರಾಫರ್, 428 ಗ್ರೂಪ್ ಡಿ ನೌಕರರು, 389 ಪೊಲೀಸರ ಸಹಿತ ಒಟ್ಟು 2101 ಮಂದಿ ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ದ.ಕ.ಜಿಲ್ಲೆಯ 231 ಮತಗಟ್ಟೆಗಳ ಪೈಕಿ 115 ಸಾಮಾನ್ಯ, 89 ಸೂಕ್ಷ್ಮ, 27 ಅತೀಸೂಕ್ಷ್ಮ ಮತ್ತು ಉಡುಪಿ ಜಿಲ್ಲೆಯ 158 ಮತಗಟ್ಟೆಗಳ ಪೈಕಿ 130 ಸಾಮಾನ್ಯ, 26 ಸೂಕ್ಷ್ಮ, 2 ಅತೀ ಸೂಕ್ಷ್ಮ ಸಹಿತ ಒಟ್ಟು 245 ಸಾಮಾನ್ಯ, 115 ಸೂಕ್ಷ್ಮ, 29 ಅತೀ ಸೂಕ್ಷ್ಮಮತಗಟ್ಟೆಗಳು ಎಂದು ಗುರುತಿಸಲಾಗಿದೆ.

41 ಮತದಾರರು ಒಂದೇ ಒಂಡು ಡೋಸ್ ಪಡೆದಿಲ್ಲ
6040 ಮತದಾರರ ಪೈಕಿ 300 ಮಂದಿ ಕೋವಿಡ್ ಮೊದಲ ಡೋಸ್ ಮತ್ತು 5699 ಮತದಾರರು ಕೋವಿಡ್ ಎರಡನೆ ಡೋಸ್ ಪಡೆದಿದ್ದಾರೆ. 41 ಮತದಾರರು ಒಂದೇ ಒಂದು ಡೋಸ್ ಪಡೆದಿಲ್ಲ.

ಮತದಾರರ ವಿವರ

ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ 6,040 ಮತದಾರರಿದ್ದಾರೆ. ಅದರಲ್ಲಿ 2916 ಪುರುಷ ಮತ್ತು 3124 ಮಹಿಳಾ ಮತದಾರರಿದ್ದಾರೆ. ದ.ಕ. ಜಿಲ್ಲೆಯ 223 ಗ್ರಾಪಂಗಳಲ್ಲಿ 3290 ಚುನಾಯಿತ ಸದಸ್ಯರಿದ್ದಾರೆ. ಅಲ್ಲದೆ ಮಂಗಳೂರು ಮಹಾನಗರಪಾಲಿಕೆಯ 68 ಸದಸ್ಯರು, 2 ನಗರಸಭೆಯ 64 ಸದಸ್ಯರು, 2 ಪುರಸಭೆಯ 62 ಸದಸ್ಯರು, 3 ಪಟ್ಟಣ ಪಂಚಾಯತ್‌ನ 51 ಸದಸ್ಯರಿದ್ದಾರೆ. ಉಡುಪಿ ಜಿಲ್ಲೆಯ 154 ಗ್ರಾಪಂಗಳಲ್ಲಿ 2387 ಚುನಾಯಿತ ಸದಸ್ಯರಿದ್ದಾರೆ. 1 ನಗರಸಭೆಯ 41. 2 ಪುರಸಭೆಯ 58 ಸದಸ್ಯರು, 1 ಪಟ್ಟಣ ಪಂಚಾಯತ್‌ನ 19 ಸದಸ್ಯರಿದ್ದಾರೆ.

ಕಣದಲ್ಲಿರುವ ಅಭ್ಯರ್ಥಿಗಳು

ಕಾಂಗ್ರೆಸ್-ಮಂಜುನಾಥ್ ಭಂಡಾರಿ
ಬಿಜೆಪಿ-ಕೋಟ ಶ್ರೀನಿವಾಸ ಪೂಜಾರಿ
ಎಸ್‌ಡಿಪಿಐ- ಶಾಫಿ ಬೆಳ್ಳಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News