×
Ad

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ: ಆರೋಪಿ ನ್ಯಾಯವಾದಿ ರಾಜೇಶ್ ಭಟ್ ಪತ್ನಿ ಸಹಿತ ಇಬ್ಬರ ಬಂಧನ

Update: 2021-12-09 22:17 IST

ಮಂಗಳೂರು, ಡಿ.9: ನಗರದ ಕಾನೂನು ಕಾಲೇಜಿನ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿಯ ಪತ್ನಿ ಹಾಗೂ ಆರೋಪಿಗೆ ಸಹಕಾರ ನೀಡಿದ್ದ ಅಚ್ಯುತ ಭಟ್ ಎಂಬಾತನ ಮಗನನ್ನೂ ಕೂಡ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಆರೋಪಿ ನ್ಯಾಯವಾದಿ ಕೆ.ಎಸ್.ಎನ್. ರಾಜೇಶ್ ಭಟ್ ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ ನಡೆಸಿದ ಬಗ್ಗೆ ಅ.18ರಂದು ನಗರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆ ಬಳಿಕ ಆರೋಪಿ ರಾಜೇಶ್ ಭಟ್ ತಲೆಮರೆಸಿಕೊಂಡಿದ್ದಾನೆ.

ರಾಜೇಶ್ ಭಟ್‌ಗೆ ಸಹಕಾರ ನೀಡಿದ್ದ ಆರೋಪದ ಮೇಲೆ ಅನಂತ ಭಟ್ ಎಂಬಾತನನ್ನು ಬಂಧಿಸಲಾಗಿತ್ತು. ಈ ಮಧ್ಯೆ ಮತ್ತೋರ್ವ ಆರೋಪಿ ಅಚ್ಯುತ ಭಟ್ ಮತ್ತು ಆತನ ಪುತ್ರ ಅಲೋಕ್ ಎಂಬಾತ ಕೂಡ ಆರೋಪಿ ರಾಜೇಶ್ ಭಟ್‌ಗೆ ನೆರವು ನೀಡುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಕಲೆ ಹಾಕಿದ ಪೊಲೀಸರು ಗುರುವಾರ ಅಚ್ಚುತ ಭಟ್‌ನ ಮಗ ಆಲೋಕ್ ಮತ್ತು ರಾಜೇಶ್ ಭಟ್‌ನ ಪತ್ನಿಯನ್ನೂ ಕೂಡಾ ಬಂಧಿಸಿದ್ದಾರೆ. ಈಕೆ ಆರೋಪಿ ಪತಿಗೆ ಸಹಕಾರ ನೀಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರು ಜಾಮೀನು ಮೇಲೆ ಬಿಡುಗಡೆಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News