ಇರಾಕ್ ಮೇಲಿನ ದಾಳಿಗೆ ವಿಶ್ವಸಂಸ್ಥೆ ಖಂಡನೆ

Update: 2021-12-09 18:27 GMT

ವಿಶ್ವಸಂಸ್ಥೆ, ಡಿ.9: ಇತ್ತೀಚೆಗೆ ಇರಾಕ್‌ನ ಬಾಸ್ರಾ ಹಾಗೂ ಉತ್ತರದ ನಗರದಲ್ಲಿ ನಡೆದ ಸ್ಫೋಟವನ್ನು ವಿಶ್ವಸಂಸ್ಥೆ ಭದ್ರತಾ ಸಮಿತಿ ಖಂಡಿಸಿದ್ದು, ಭಯೋತ್ಪಾದನೆಯ ವಿರುದ್ಧ , ಅದರಲ್ಲೂ ನಿರ್ದಿಷ್ಟವಾಗಿ ದಾಯೆಷ್ ಸಂಘಟನೆ ವಿರುದ್ಧ ಇರಾಕ್ ನಡೆಸುತ್ತಿರುವ ಹೋರಾಟಕ್ಕೆ ತಮ್ಮ ಬೆಂಬಲವನ್ನು ಸದಸ್ಯ ದೇಶಗಳು ಪುನರುಚ್ಚರಿಸಿವೆ.

ಬಾಸ್ರಾದಲ್ಲಿ ಡಿಸೆಂಬರ್ 7ರಂದು ನಡೆದ ಸ್ಫೋಟದಲ್ಲಿ ಕನಿಷ್ಟ 4 ಮಂದಿ ಮೃತಪಟ್ಟು 20 ಮಂದಿ ಗಾಯಗೊಂಡಿದ್ದರು.ಡಿಸೆಂಬರ್ 3ರಂದು ಉತ್ತರ ಭಾಗದಲ್ಲಿ ನಡೆದಿದ್ದ ಸ್ಫೋಟದಲ್ಲಿ ಕನಿಷ್ಟ 13 ಮಂದಿ ಮೃತರಾಗಿದ್ದರು. ಈ ಎರಡೂ ಸ್ಫೋಟಗಳ ಹೊಣೆಯನ್ನು ದಯೆಷ್ ಸಂಘಟನೆ ವಹಿಸಿಕೊಂಡಿದೆ.

ಮೃತರ ಕುಟುಂಬದವರಿಗೆ ಸಂತಾಪ ಸೂಚಿಸಿರುವ ಭದ್ರತಾ ಸಮಿತಿ ಸದಸ್ಯರು, ಸ್ವತಂತ್ರ, ಸಾರ್ವಭೌಮ, ಪ್ರಾದೇಶಿಕ ಸಮಗ್ರತೆ, ಪ್ರಜಾಪ್ರಭುತ್ವ ಪ್ರಕ್ರಿಯೆ ಮತ್ತು ಇರಾಕ್ ನ ಸಮೃದ್ಧತೆಗೆ ಬೆಂಬಲ ನೀಡುವುದನ್ನು ಪುನರುಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News