×
Ad

ಪರ್ಲೊಟ್ಟು ಅಬೂಬಕ್ಕರ್ ಸಿದ್ದೀಕ್ ಜುಮಾ ಮಸೀದಿ ನೂತನ ಅಧ್ಯಕ್ಷರಾಗಿ ಅಬ್ದುಲ್ ಖಾದರ್ ಆಯ್ಕೆ

Update: 2021-12-10 23:49 IST
 ದರ್ಬಾರ್ ಅಬ್ದುಲ್ ಖಾದರ್ / ಸಿದ್ದೀಕ್ ಬಿ.ಟಿ. / ಕೆ.ಬಿ.ಖಾಸಿಂ ಹಾಜಿ 

ವಿಟ್ಲ : ಡಿ.10, ನೇರಳಕಟ್ಟೆ ಸಮೀಪದ ಪರ್ಲೊಟ್ಟು ಅಬೂಬಕ್ಕರ್ ಸಿದ್ದೀಕ್ ಜುಮಾ ಮಸೀದಿಯ ನೂತನ ಅಧ್ಯಕ್ಷರಾಗಿ ದರ್ಬಾರ್ ಅಬ್ದುಲ್ ಖಾದರ್ ಆಯ್ಕೆಯಾಗಿದ್ದಾರೆ.

ಮಸೀದಿ ಗೌರವಾಧ್ಯಕ್ಷ , ಕೊಡಾಜೆ ಬದ್ರಿಯಾ ಜುಮಾ ಮಸೀದಿ ಖತೀಬ್ ಪಿ.ಕೆ.ಆದಂ ದಾರಿಮಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಮಸೀದಿಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ನಡೆಯಿತು. ಈ ಸಂದರ್ಭದಲ್ಲಿ ಸ್ಥಳೀಯ ಖತೀಬ್ ಸಯ್ಯದ್ ಅಲಿ ಉಪಸ್ಥಿತರಿದ್ದರು. 

ಉಪಾಧ್ಯಕ್ಷರಾಗಿ ಅಬ್ದುಲ್ ರಶೀದ್ ಪರ್ಲೊಟ್ಟು, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಟಿ. ಸಿದ್ದೀಕ್, ಜೊತೆ ಕಾರ್ಯದರ್ಶಿ ಯಾಗಿ ಶರೀಫ್ ಪರ್ಲೊಟ್ಟು, ಕೋಶಾಧಿಕಾರಿಯಾಗಿ ಕೆ.ಬಿ. ಖಾಸಿಂ ಹಾಜಿ ಮಿತ್ತೂರು ಆಯ್ಕೆಯಾದರು.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಸ್.ಎಂ. ಮುಹಮ್ಮದ್ ರಫೀಕ್ ಹಾಜಿ ನೇರಳಕಟ್ಟೆ, ಹೈದರ್ ಬೋಳಿಯಾರು, ಪಿ.ಕೆ.ಅಬ್ಬಾಸ್  ಪರ್ಲೊಟ್ಟು, ಸಮದ್  ಪರ್ಲೊಟ್ಟು, ಪಿ.ಕೆ.ಝುಬೈರ್ ಪರ್ಲೊಟ್ಟು, ಇಸಾಕ್ ಕೌಸರಿ ಪರ್ಲೊಟ್ಟು , ಕೆ.ಬಿ. ಇಸ್ಮಾಯಿಲ್ ಪರ್ಲೊಟ್ಟು ಹಾಗೂ ಅಬ್ದುಲ್ ಲತೀಫ್ ನೇರಳಕಟ್ಟೆ ಇವರನ್ನು ನೇಮಿಸಲಾಯಿತು.

ಶರೀಫ್ ಪರ್ಲೊಟ್ಟು ವಾರ್ಷಿಕ ವರದಿ ವಾಚಿಸಿ, ಸಿದ್ದೀಕ್ ಬಿ.ಟಿ. ಲೆಕ್ಕಪತ್ರ ಮಂಡಿಸಿದರು. ರಶೀದ್ ಪರ್ಲೊಟ್ಟು ಸ್ವಾಗತಿಸಿ, ವಂದಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News